

ಮಂಗಳೂರು: ದಕ್ಕೆಯಲ್ಲಿ ಮೀನುಗಾರರೊಬ್ಬರು ಆಕಸ್ಮಿಕವಾಗಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದವರ ಮೃತದೇಹ ಪಣಂಬೂರು ಬೀಚ್ ಬಳಿ ಪತ್ತೆಯಾಗಿದೆ.
ಆಂಧ್ರಪ್ರದೇಶದ ಮೈಲಪಿಲ್ಲಿ ನಲ್ಲಂಮ್ ನಾಯ್ದು (43) ಮೃತಪಟ್ಟವರು. ಅಮೃತ್ 3 ಮೀನುಗಾರಿಕಾ ದೋಣಿಯಲ್ಲಿ ಇವರು ಕೆಲಸ ಮಾಡುತ್ತಿದ್ದರು. ಸೆ.23ರಂದು ದಕ್ಕೆಯಲ್ಲಿ ದೋಣಿಗೆ ಹತ್ತುತ್ತಿದ್ದಾಗ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು. ಅಗ್ನಿಶಾಮಕದಳ, ಮುಳುಗು ತಜ್ಞರು ಸಹಿತ ಹುಡುಕಾಟ ನಡೆಸಿದ್ದರೂ ಸಿಕ್ಕಿರಲಿಲ್ಲ. ಸೆ.28ರಂದು ಮೃತದೇಹ ಪತ್ತೆಯಾಗಿದೆ. ದೇಹ ಸಂಪೂರ್ಣ ಕೊಳೆತು ಹೋಗಿದ್ದು, ಮನೆಯವರು ಬಂದು ಅವರು ಧರಿಸಿದ್ದ ಪ್ಯಾಂಟ್‌ನ ಆಧಾರದಲ್ಲಿ ಗುರುತು ಪತ್ತೆ ಮಾಡಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರು ಮಂಗಳೂರಿನಲ್ಲೇ ಶವ ಸಂಸ್ಕಾರ ನಡೆಸಿದ್ದಾರೆ.