ವಕ್ಫ್ ರಾಕ್ಷಸಿ ಕೃತ್ಯಕ್ಕೆ ಕೈ ಸರ್ಕಾರ ಬಲ

oppo_2
oppo_2
Published on

ಕಲಬುರಗಿ: ಇಡೀ ದೇಶದಲ್ಲಿ ವಕ್ಫ್ ಮಂಡಳಿಯಿAದ ರೈತರ, ಮಠ, ಮಂದಿರಗಳ ಭೂಮಿ ಕಬಳಿಸುವ ವಾತಾವರಣ ಸೃಷ್ಟಿಸಿರುವುದು ಪೂರ್ವನಿಯೋಜಿತ ಕೃತ್ಯವಾಗಿದ್ದು, ಹಿಂದುಗಳ ಆಸ್ತಿ ಮೇಲೆ ಕಣ್ಣಿಟ್ಟು, ತೆಕ್ಕೆಗೆ ತೆಗೆದುಕೊಳ್ಳುವ ಷಡ್ಯಂತ್ರ ರೂಪಿಸಿದ್ದು, ಈ ಕೃತ್ಯಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ರಕ್ಷಣೆ ನೀಡಿ, ಬೆಂಗಾವಲಾಗಿ ನಿಂತ್ತಿದೆ ಎಂದು ಆಂದೋಲಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಕಿಡಿ ಕಾರಿದರು.

ಮನಸ್ಸಿಗೆ ಬಂದ ಆಸ್ತಿಯ ಮೇಲೆ ವಕ್ಫ್ ಉಲ್ಲೇಖಿಸಲಾಗುತ್ತಿದೆ. ಹೈಕೋರ್ಟ್ಗೆ ಹೋಗುವಂತಿಲ್ಲ. ಟ್ರಿಬ್ಯುನಲ್ ಕೋರ್ಟನಲ್ಲಿ ಅವರೇ ಇರುತ್ತಾರೆ. ಯಾರನ್ನು ಕೇಳಬೇಕು? ಇಡೀ ಭಾರತವನ್ನು ಇಸ್ಲಾಂ ರಾಷ್ಟç ಮಾಡುವ ಕಾರಣಕ್ಕೆ ಇಂತಹ ಹುನ್ನಾರ ಆರಂಭಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕಿಡಿ ಕಾರಿದರು.

ರೈತರದ್ದು ಮಾತ್ರವಲ್ಲ ಸರ್ಕಾರದ ಆಸ್ತಿಯನ್ನು ವಕ್ಫ್ ಮಾಡಿದ್ದರೂ ತೇಪೆ ಹಚ್ಚಲಾಗುತ್ತಿದೆ. ಮುಖ್ಯಮಂತ್ರಿ ನಿರ್ಧಾರ ಕಾಟಾಚಾರಕ್ಕೆ ಎಂಬAತಾಗಿದೆ. ಜಮೀರ್ ಅಹ್ಮದ್‌ನ ಜತೆಗೆ ಕರೆದುಕೊಂಡು ಸುದ್ದಿಗೋಷ್ಠಿ ಮಾಡಲಿ. ಸರ್ಕಾರಕ್ಕಿಂತ ವಕ್ಫ್ ದೊಡ್ಡದಾ? ಜಮೀರ್ ಹುಚ್ಚಾಟಕ್ಕೆ ಲಗಾಮು ಹಾಕುವವರು ಇಲ್ಲವೇ ಎಂದು ಪ್ರಶ್ನಿಸಿದರು.

ದಲಿತ ಭೂಮಿ ವಕ್ಫ್: ರಾಜ್ಯದಲ್ಲಿ ದಲಿತ, ಬಸವಣ್ಣನವರ ಹೆಸರು ಹೇಳುವ ಸಚಿವರಿಗೆ ದಲಿತರ ಜಮೀನು ವಕ್ಫ್ ಆಗಿದ್ದು, ಅರಿವಿಗೆ ಬಂದಿಲ್ಲವೇ?. ರೈತ ಜಮೀನಿಗೆ ಹೋದರೆ ಕೇಸ್ ಹಾಕಿ, ಟ್ರಾÈಕ್ಟರ್ ಜಪ್ತಿ ಮಾಡಿದ್ದಾರೆ. ಇದಕ್ಕೆ ಕಾರಣ ಮುಸ್ಲಿಂ ತುಷ್ಟೀಕರಣ. ಕೆಲ ರೈತರು ಸಹ ಹೊಲದಲ್ಲಿ ದೌಲ್‌ಮಲಿಕ್, ಮೈಬೂಬ್ ಸುಬಾನಿ ಗೋರಿ ಇಟ್ಟೀರ್ತಾರೆ. ಈಗ ಅನುಭವಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದ ಹಿರಿಯ ಮುಖಂಡರ ಕುಟುಂಬದ ಬಗ್ಗೆ ಜಮೀರ್ ಅವಹೇಳನಕಾರಿ ಹೇಳಿಕೆ ನೀಡುತ್ತಾನೆ. ಆತನ ನಾಲಿಗೆಗೆ ಲಗಾಮು ಇಲ್ಲ. ಈತನನ್ನು ಸಚಿವ ಸ್ಥಾನದಿಂದ ವಜಾ ಮಾಡಿ, ಪಾಕಿಸ್ತಾನಕ್ಕೆ ಕಳುಹಿಸಬೇಕು. ಸಚಿವ ಜಮೀರ್ ಅಹ್ಮದ್‌ಗೆ ಕೇವಲ ಬಡ ರೈತರು ಕಾಣಿಸುತ್ತಾರೆ. ಆತನಿಗೆ ತಾಕತ್ತು ಇದ್ದರೆ ಕಲಬುರಗಿಯ ಘಟಾನುಘಟಿ ನಾಯಕರು ವಕ್ಫ್ ಆಸ್ತಿ ಹೊಡೆದುಕೊಂಡಿದ್ದು, ಅದನ್ನು ತೆರವುಗೊಳಿಸಲಿ ಎಂದು ಆಗ್ರಹಿಸಿದರು.

ಶ್ರೀ ಗುರುಮೂರ್ತಿ ಶಿವಾಚಾರ್ಯರು, ಶ್ರೀ ರೇವಣಸಿದ್ಧ ಶಿವಾಚಾರ್ಯರು, ಶ್ರೀ ರಾಜಶೇಖರ ಶಿವಾಚಾರ್ಯರು, ಶ್ರೀ ಶಿವಮೂರ್ತಿ ಶಿವಾಚಾರ್ಯರು, ಶ್ರೀ ಪರ್ವತೇಶ್ವರ ಶಿವಾಚಾರ್ಯರು, ಶ್ರೀ ಅಪ್ಪಾರಾವ ದೇವಿ ಮುತ್ಯಾ, ಶ್ರೀ ಚರಲಿಂಗ ಸ್ವಾಮೀಜಿ, ಪ್ರಮುಖರಾದ ಶಿವರಾಜ ಸಂಗೋಳಗಿ, ಪ್ರಶಾಂತ ಗುಡ್ಡಾ, ಅಶ್ವಿನಕುಮಾರ, ಅನೀಲ ತಂಬಾಕೆ, ಶ್ರೀಶೈಲ ಮೂಲಗೆ, ದಯಾನಂದ ಪಾಟೀಲ್ ಇತರರಿದ್ದರು.

೧೦೦ ಮಠಾಧೀಶರ ನೇತೃತ್ವದಲ್ಲಿ ಹೋರಾಟ

ಕಲಬುರಗಿ ಜಿಲ್ಲೆಯಲ್ಲೂ ಹಲವು ರೈತರ ಪಹಣಿಯಲ್ಲಿ ವಕ್ಫ್ ಬಂದಿದ್ದು, ನೋಟಿಸ್ ನೀಡಿದ್ದಾರೆ. ಯಾವುದೇ ರಾಜಕಾರಣಿ ರೈತರ ಜತೆ ನಿಲ್ಲುತ್ತಿಲ್ಲ. ಇದನ್ನು ಖಂಡಿಸಿ, ರೈತರಿಗೆ ಅವರ ಜಮೀನು ವಾಪಸ್ ನೀಡಲು ಆಗ್ರಹಿಸಿ ನೇಗಿಲಯೋಗಿ ಸ್ವಾಭಿಮಾನಿ ವೇದಿಕೆಯಿಂದ ನ.೨೧ರಿಂದ ಮೂರು ದಿನ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಶ್ರೀ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು. ಜಿಲ್ಲೆಯ ೧೦೦ಕ್ಕೂ ಹೆಚ್ಚು ಮಠಾಧೀಶರು, ಸಹಸ್ರಾರು ರೈತರು ಭಾಗವಹಿಸಲಿದ್ದು, ಬೆಳಗ್ಗೆ ೧೦ಕ್ಕೆ ಗಂಜ್ ಪ್ರದೇಶದಲ್ಲಿ ನಗರೇಶ್ವರ ಶಾಲೆಯಿಂದ ಜಗತ್ ವೃತ್ತದವರೆಗೆ ನಡಿಗೆಯೊಂದಿಗೆ ಆಗಮಿಸಿ, ಜಗತ್‌ನ ಬಸವೇಶ್ವರ ಮೂರ್ತಿ ಆವರಣದ ಪಕ್ಕದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು. ನೋಟಿಸ್ ವಾಪಸ್ ಪಡೆಯಬೇಕು, ಬೋರ್ಡ್ ಕಿತ್ತುಹಾಕಬೇಕು, ರೈತರ ಹಿತ ಕಾಪಾಡಲು ರಾಜ್ಯ ಸರ್ಕಾರ ಮುಂದೆ ಬರಬೇಕು ಎಂದು ಆಗ್ರಹಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net