ಆಂಧ್ರದಿಂದ ಮಾನ್ವಿ ತಾಲೂಕಿಗೆ ಬಂದ 47 ಜನ ಕ್ಯಾರಂಟೈನ್‌ಗೆ - ತಾಲೂಕು ವೈದ್ಯಾಧಿಕಾರಿ ಚಂದ್ರಶೇಖರ ಹಿರೇಮಠ ಮಾಹಿತಿ

300420 Andhra people visit Rajolli Village
Published on

ಮಾನ್ವಿ: ನೆರೆ ರಾಜ್ಯ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ತಾಳೆಚೆರವು ಗ್ರಾಮದಿಂದ ತಾಲೂಕಿನ ರಾಜೋಳ್ಳಿ, ಗೋರ‌್ಕಲ್ ಮತ್ತು ವಲ್ಕಂದಿನ್ನಿ ಗ್ರಾಮಗಳಿಗೆ ಬಂದ 47 ಜನರನ್ನು ಮೇ 15 ರವರೆಗೆ ಗೃಹ ಬಂಧನದಲ್ಲಿ ಇಡಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಚಂದ್ರಶೇಖರ ಹಿರೇಮಠ ತಿಳಿಸಿದರು.

ರಾಜೋಳ್ಳಿ ಗ್ರಾಮದಲ್ಲಿ ಗುರುವಾರ ಆರೋಗ್ಯ ಪರೀಕ್ಷಿಸಿದ ಬಳಿಕ ಮಾತನಾಡಿದರು. ಮೆಣಸಿನಕಾಯಿ ಬಿಡಿಸಲು ಕೂಲಿ ಕಾರ್ಮಿಕರು ಹೋಗಿದ್ದರು. ಆಂಧ್ರದ ಗುಂಟೂರು ಕರೊನಾ ವೈರಸ್ ರೆಡ್ ರೆನ್‌ನಲ್ಲಿ ಇದ್ದರಿಂದ ಕಾರ್ಮಿಕರು ಸ್ವಗ್ರಾಮಗಳಿಗೆ ಆಗಮಿಸುತ್ತಿದ್ದಾರೆ. ಗುಂಟೂರು ಜಿಲ್ಲೆಯ ತಾಳೆಚೆರವು ಗ್ರಾಮದಿಂದ ಆಂಧ್ರದ ನದಿದಂಡೆ ಮೂಲಕ ನದಿಯಲ್ಲಿ ನಡೆದುಕೊಂಡು ಬರುತ್ತಿದ್ದಾರೆ. ಆಂಧ್ರದಿಂದ ಜನರು ಬರುವುದನ್ನು ಅರಿತ ಗ್ರಾಮಸ್ಥರು ತಾಲೂಕು ಆಡಳಿತ, ವೈದ್ಯರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆ ಎಂದರು.

ರಾಜೋಳ್ಳಿ ಗ್ರಾಮದ 27, ಗೋರ‌್ಕಲ್-10, ವಲ್ಕಂದಿನ್ನಿ-12 ಸೇರಿ 47 ಜನರನ್ನ ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ. ಆಯಾ ಗ್ರಾಮದ ತಮ್ಮ ಮನೆಯಲ್ಲಿ ಹೋಮ್ ಕ್ಯಾರಂಟೈನ್‌ನಲ್ಲಿ (ಗೃಹಬಂಧನ) ಇರಿಸಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net