

ವಿಜಯಪುರ: ಅಕ್ರಮವಾಗಿ ಬೈಕ್‌ನಲ್ಲಿ ಗಾಂಜಾ ಸಾಗಾಟ ವೇಳೆಯಲ್ಲಿ ಅಬಕಾರಿ ಪೊಲೀಸರು ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಂಗಾಪೂರ ಕ್ರಾಸ್ ಬಳಿ ನಡೆದಿದೆ.
ಪರಸಪ್ಪ ಚನ್ನಪ್ಪ ಸಿಂಗೆ ಬಂಧಿತ ಆರೋಪಿ. ಇನ್ನು ಆರೋಪಿ ಪರಸಪ್ಪ ಬೈಕ್ ನಲ್ಲಿ ೯೮೦ ಗ್ರಾಂ ಒಣಗಿದ ಗಾಂಜಾ ಸಾಗಾಟಕ್ಕೆ ಯತ್ನಿಸಿದಾಗ ಪೊಲೀಸರು ದಾಳಿಗೈದು ಒಂದು ಲಕ್ಷ ಮೌಲ್ಯದ ಬೈಕ್, ಗಾಂಜಾ ಜಪ್ತಿಗೈದಿದ್ದಾರೆ. ಈ ಕುರಿತು ಅಬಕಾರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.