ಪುರಾತನ ಕಲ್ಯಾಣಿ ಅಕ್ರಮ ಒತ್ತುವರಿ ಆರೋಪ, ಸ್ಥಳಕ್ಕೆ ಬಂದು ಪರಿಶೀಲಿಸಿದ ನ್ಯಾಯಾಧೀಶರು

IMG_20250926_230847.jpg
Published on

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿನ ಕಂದವಾರ ಗ್ರಾಮದ ಮುಖ್ಯ ರಸ್ತೆಗೆ ಹೊಂದಿಕೊಂಡಿದ್ದ ಪುರಾತನ ಕಲ್ಯಾಣಿಯನ್ನು ಬಲಾಢ್ಯರು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಶಿಲ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು,
ಸರ್ಕಾರದ ಜಾಗವನ್ನು ಕೆಲವರು ಅಕ್ರಮ ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿ ದಾಖಲೆ ಸಮೇತ ದೂರನ್ನು ಗ್ರಾಮಸ್ಥರು ಸಲ್ಲಿಸಿದ್ದಾರೆ.
ಕಲ್ಯಾಣಿ ಸೇರಿದಂತೆ ಸವೇ ನಂ.೪೨/೨,೪೩/೧,೪೩/೩ ರಲ್ಲಿನ ಜಾಗವನ್ನು ಕುಕ್ಕಲ ನರಸಿಂಹಯ್ಯ, ಕುಕ್ಕಲ ತಿಮ್ಮಯ್ಯ, ಮತ್ತು ಚಿನ್ನ ನರಸಿಂಹಯ್ಯ ೧೯೦೨ರಲ್ಲಿಯೇ ಸಬ್ ರಿಜಿಸ್ಟಾçರ್ ಕಛೇರಿಯಲ್ಲಿ ನೋಂದಣಿ ಮಾಡಿಸಿ ಸರ್ಕಾರಕ್ಕೆ ಬಿಟ್ಟುಕೊಟ್ಟಿದ್ದಾರೆ. ಇಂತಹ ಭೂಮಿಯನ್ನು ಕೆಲವರು ಅನಧಿಕೃತವಾಗಿ ಹೆಸರಿಗೆ ಖಾತೆ ಮಾಡಿಸಿಕೊಂಡು, ಇತರರಿಗೆ ಪರಭಾರೆ ಮಾಡಿದ್ದಾರೆ. ಜನೋಪಯೋಗಕಾರಿ ಕಲ್ಯಾಣಿಯನ್ನು ಮುಚ್ಚಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. 
ಸ್ಥಳ ಪರಿಶೀಲಿಸಿದ ನ್ಯಾಯಾಧೀಶರು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಕೆ.ಆರ್.ದೀಪಕ್, ವಕೀಲರ ಸಂಘದ ಅಧ್ಯಕ್ಷ ಕೆ.ವಿ.ಅಭಿಲಾಶ್, ವಕೀಲರಾದ ನವೀನ್‌ಕುಮಾರ್, ನರಸಿಂಹಮೂರ್ತಿ, ಸರಳ,ಅರುಣ, ಗ್ರಾಮದ ಮುಖಂಡರಾದ ರಾಮಸ್ವಾಮಿ, ಲಕ್ಷ್ಮೀನಾರಾಯಣ, ಕೆ.ಎನ್.ಅಶೋಕ್‌ ಕುಮಾರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net