ಪ್ರಾಚೀನ ಕಲೆ ಉಳಿಯಲು ಸಾಧ್ಯ

21ark1,
ಅರಕಲಗೂಡಿನಲ್ಲಿ ಶುಕ್ರವಾರ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಕನ್ನಡದ ನಂ 1. ದಿನಪತ್ರಿಕೆ ವಿಜಯವಾಣಿ ಸಹಭಾಗಿತ್ವದಲ್ಲಿ ಆಯೋಜಿಸಿದ್ದ 10ನೇ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಯೋಗಾಸನ ಪ್ರದರ್ಸಿಸಲಾಯಿತು.
Published on

ಅರಕಲಗೂಡು: ಪಟ್ಟಣದ ಅರಸು ಭವನದಲ್ಲಿ ಶುಕ್ರವಾರ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಕನ್ನಡದ ನಂ 1. ದಿನಪತ್ರಿಕೆ ವಿಜಯವಾಣಿ ಸಹಭಾಗಿತ್ವದಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.

ಏಕಾತ್ಮತ ಸ್ತೋತ್ರ, ಅಮೃತ ವಾಚನ, ಪಂಚಾಂಗ ಪಠಣ, ಅಗ್ನಿ ಹೋತ್ರ, ಸಂಕಲ್ಪದ ಬಳಿಕ ವಿವಿಧ ಭಂಗಿಯಲ್ಲಿ ಯೋಗಾಸನ ಪ್ರದರ್ಶಿಸಿದರು.
ಸಮಿತಿಯ ತಾಲೂಕು ಮಹಿಳಾ ಸಂಚಾಲಕಿ ಮಣಿ ಮಾತನಾಡಿ, ಯೋಗ ಕಲೆ ಭಾರತೀಯ ಸನಾತನ ಸಂಸ್ಕೃತಿಯ ಪ್ರತೀಕವಾಗಿದ್ದು ನಿರಂತರವಾಗಿ ಯೋಗಾಸನ ನಡೆಸುವ ಮೂಲಕ ಯೋಗ ಜೀವನ ಪದ್ಧತಿ ಅಳವಡಿಸಿಕೊಳ್ಳುವುದು ಒಳಿತು ಎಂದು ಸಲಹೆ ನೀಡಿದರು.

ಸಮಿತಿಯ ಸಂಚಾಲಕ ಎಚ್. ಮಾದೇಶ್ ಮಾತನಾಡಿ, ಎಲ್ಲರೂ ನಿಯಮಿತವಾಗಿ ಯೋಗಾಸನ ಮಾಡಿದರೆ ಆರೋಗ್ಯ ಕಾಪಾಡಿಕೊಳ್ಳುವ ಜತೆಗೆ ನಮ್ಮ ಪ್ರಾಚೀನ ಕಲೆಯಾದ ಯೋಗ ಉಳಿಸಿಕೊಳ್ಳಬಹುದು ಎಂದರು.
ಯೋಗ ಶಿಕ್ಷಕರಾದ ಪ್ರಕಾಶ್, ರೇಣುಕಾ, ಉಷಾ, ಜಲಜಾಕ್ಷಿ, ಪ್ರಶಾಂತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net