ಅಂಚಟಗೇರಿಯಲ್ಲಿ ಮೈಲಾರಲಿಂಗೇಶ್ವರ ಜಾತ್ರೆ

Published on

ಹುಬ್ಬಳ್ಳಿ: ತಾಲೂಕಿನ ಅಂಚಟಗೇರಿ ಗ್ರಾಮದಲ್ಲಿ ಶ್ರೀ ಮೈಲಾರಲಿಂಗೇಶ್ವರ ಜಾತ್ರೆ ಡಿ. 7ರಿಂದ ಎರಡು ದಿನ ನಡೆಯಲಿದೆ.

ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ ಭಂಡಾರ ಕಟ್ಟುವುದು, ರಾತ್ರಿ 9ಕ್ಕೆ ಹಾವೇರಿಯ ಸ್ವರ ಸೌರಭ ಅಂಧರ ವಾದ್ಯಗೋಷ್ಠಿ ಕಲಾ ತಂಡದಿಂದ ಕಾರ್ಯಕ್ರಮ ನಡೆಯಲಿದೆ.

8ರಂದು ಬೆಳಗ್ಗೆ 9ಗಂಟೆಗೆ ಭಂಡಾರ ಒಡೆಯುವುದು, ನಂತರ ಪಲ್ಲಕ್ಕಿ ಉತ್ಸವ, ಸಂಜೆ 4ಕ್ಕೆ ಪವಾಡ ಕಾರ್ಯಕ್ರಮಗಳು, ಅನ್ನಸಂತರ್ಪಣೆ ಜರುಗಲಿವೆ. ಭಕ್ತರು ಪಾಲ್ಗೊಳ್ಳಬೇಕೆಂದು ಪ್ರಕಟಣೆ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net