ಪೂರ್ವಿಕರ ಸಂಪ್ರದಾಯ ಉಳಿಸಿ ಬೆಳೆಸಿ

31 ARKERA 01
ಅರಕೇರಾ ಚಾವಡಿ ಕಟ್ಟೆಯಲ್ಲಿ ಯುಗಾದಿ ಅಂಗವಾಗಿ ನೂತನ ಪಂಚಾಂಗ ಪಠಣದ ವಾಚನ ಹಾಗೂ ಗ್ರಾಮದೇವತೆ ಭಾಗ್ಯವಂತಿ ದೇವಿಯ ಜಾತ್ರಾ ಮಹೋತ್ಸವ ಆಚರಣೆ ಪೂರ್ವಭಾವಿ ಸಭೆಯಲ್ಲಿ ಮಾಜಿ ಸಂಸದ ಬಿ.ವಿ ನಾಯಕ ಮಾತನಾಡಿದರು. ಮಾಜಿ ಸಚಿವ ಕೆ.ಶಿವನಗೌಡ ನಾಯಕ,ಚನ್ನವೀರಯ್ಯ ಸ್ವಾಮಿ ಹಿರೇಮಠ, ಪರಮೇಶ ಪೂಜಾರಿ, ಗೋಪಿಕೃಷ್ಣ ಗುರುವಿನ ಸಾನ್ನಿಧ್ಯ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಸತ್ಯನಾರಾಯಣ ನಾಯಕ ಪೊಲೀಸ್ ಪಾಟೀಲ್, ಆರ್ ಕೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ನಾಯಕ ಇತರರಿದ್ದರು.
Published on

ಅರಕೇರಾ: ಚುನಾವಣೆ ಬಂದಾಗ ರಾಜಕೀಯ ಮಾಡುತ್ತೇವೆ. ಊರಿನ ವಿಚಾರ ಬಂದಾಗ ಒಗ್ಗಟ್ಟಾಗಿರುತ್ತೇವೆ ಎಂದು ಮಾಜಿ ಸಂಸದ ಬಿ.ವಿ ನಾಯಕ ಹೇಳಿದರು.

ಪಟ್ಟಣದ ಚಾವಡಿ ಕಟ್ಟೆಯಲ್ಲಿ ಯುಗಾದಿ ಅಂಗವಾಗಿ ಪಂಚಾಂಗ ಪಠಣದ ವಾಚನ ಹಾಗೂ ಗ್ರಾಮದೇವತೆ ಭಾಗ್ಯವಂತಿ ದೇವಿಯ ಜಾತ್ರಾ ಮಹೋತ್ಸವ ಆಚರಣೆ ಪೂರ್ವಭಾವಿ ಸಭೆಯಲ್ಲಿ ಭಾನುವಾರ ಮಾತನಾಡಿದರು.

ದಶಕಗಳಿಂದ ಭಾಗ್ಯವಂತಿ ದೇವಿ ಜಾತ್ರೆ ಮಾಡಲಾಗಿತ್ತು. ನಂತರ ಇಲ್ಲಿಯವರೆಗೆ ದೇವಿಯ ಜಾತ್ರೆ ನಡೆದಿಲ್ಲ. ಇದರಿಂದ ಊರಿನ ಜನತೆಗೆ ಒಂದಲ್ಲ ಒಂದು ರೀತಿಯ ದೇವಿಯ ಶಕ್ತಿ ಕಾಡುತ್ತಿದೆ. ಈ ವಷರ್ ಜಾತ್ರೆ ಆಚರಣೆಯಿಂದ ಮಳೆ, ಬೆಳೆ, ಶಾಂತಿ ನೆಲೆಸಲಿದೆ ಎಂಬ ಭಾವನೆಯಿದೆ ಎಂದರು.

ಪೂರ್ವಿಕರು ಆಚರಿಸುತ್ತಿದ್ದ ಹಬ್ಬ ಹರಿದಿನ, ಸಂಪ್ರದಾಯಗಳನ್ನು ಯುವ ಪೀಳಿಗೆ ಮುಂದುವರಿಸಬೇಕು. ಅಧಿಕಾರ ಇದ್ದರೂ, ಇಲ್ಲದಿದ್ದರೂ ಜನರ ಕಷ್ಟಗಳಿಗೆ ಸ್ಪಂದಿಸುತ್ತೇವೆ. ಅರಕೇರಾಕ್ಕೆ ಹೊರಗಿನವರು ಪಾರುಪತ್ಯ ನಡೆಸಿ, ಇಲ್ಲಿನವರ ಮನಸ್ಸು ಕೆಡಿಸುವ ಹುನ್ನಾರ ನಡೆಸಿದ್ದಾರೆ. ಅದು ಶಾಶ್ವತವಾಗಿ ನಡೆಯುವುದಿಲ್ಲ ಎಂದರು.

ಮಾಜಿ ಸಚಿವ ಕೆ.ಶಿವನಗೌಡ ನಾಯಕ ಮಾತನಾಡಿ, ಹದಿಮೂರು ವಷರ್ಗಳ ನಂತರ ನಡೆಯುತ್ತಿರುವ ಜಾತ್ರೆಗೆ ನೂರಾರು ಪ್ರಯತ್ನಗಳು ನಡೆಯಬೇಕು. ಜಾತ್ರೆಗೆ ಹಿರಿಯರ ಮಾರ್ಗದರ್ಶನ ಅಗತ್ಯವಿದೆ. ಎರಡೂ ಪಕ್ಷಗಳು ಒಂದೇ ಊರಲ್ಲಿದ್ದರೂ ಎಂದಿಗೂ ದ್ವೇಷ ಮಾಡಿಲ್ಲ. ರಾಜಕೀಯ ಹರಿಯುವ ನೀರಿದ್ದಂತೆ. ಕೆಲ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಜನರು ನಮ್ಮನ್ನು ತಿರಸ್ಕರಿಸಿದ್ದಾರೆ. ಜನರ ತೀರ್ಮಾನಕ್ಕೆ ನಾವು ಬದ್ಧರಿದ್ದೇವೆ ಎಂದರು.

ಹಿರಿಯ ಮನೆತನದ ಜಿಪಂ ಮಾಜಿ ಸದಸ್ಯ ರಾಜಾ ಸತ್ಯನಾರಾಯಣ ನಾಯಕ ಪೊಲೀಸ್ ಪಾಟೀಲ್ ಮಾತನಾಡಿ, ಜೂನ್ 3ಕ್ಕೆ ಮೊದಲ ಮಂಗಳವಾರದಿಂದ ಆರಾಧ್ಯ ದೇವತೆ ಭಾಗ್ಯವಂತಿ ದೇವಿಯ ಜಾತ್ರೆಗೆ ಚಾಲನೆ ನೀಡಲಾಗುವುದು ಎಂದು ಘೋಷಣೆ ಮಾಡಿದರು.

ನಿವೃತ್ತ ಬ್ಯಾಂಕ್ ಅಧಿಕಾರಿ ಕೆ.ಅನಂತರಾಜ ನಾಯಕ, ಗ್ರಾಪಂ ಮಾಜಿ ಅಧ್ಯಕ್ಷ ತಿಮ್ಮಪ್ಪ ನಾಯಕ ಪೊಲೀಸ್ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net