ಪವನ್ ಶಾಲೆಯಲ್ಲಿ ‘ಅನಾವರಣ’ ದಿನಾಚರಣೆ

Anavarana
Published on

ಧಾರವಾಡ: ನಗರದ ಪವನ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದ ಶಂಕರಗೌಡ ಪಾಟೀಲ ಅವರ ಜನ್ಮದಿನವನ್ನು ‘ಅನಾವರಣ ದಿನ’ವನ್ನಾಗಿ ಗುರುವಾರ ಆಚರಿಸಲಾಯಿತು.

‘ಅನಾವರಣ ದಿನ’ದ ಮಹತ್ವ ಹಾಗೂ ವಿಶೇಷತೆಯನ್ನು ಹಿರಿಯ ಶಿಕ್ಷಕಿ ಸುಜಾತಾ ಮೊಕಾಶಿ ವಿವರಿಸಿದರು.

2022- 23ನೇ ಸಾಲಿನ 10ನೇ ತರಗತಿಯಲ್ಲಿ ಅತ್ಯುನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳು, ಹೆಲ್ಪಿಂಗ್ ಹ್ಯಾಂಡ್ ಫೌಂಡೇಷನ್‌ನ ನವೀನ್ ಹೆಸರೆಡ್ಡಿ, ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ ಸಂತೋಷ ಮೇಗೂರ, ಹೋಪ್ ಸಂಸ್ಥೆಯಡಿ ಪ್ರಾಣಿಗಳ ಪಾಲನೆ ಮಾಡುತ್ತಿರುವ ಸೋಮಶೇಖರ, ವೃದ್ಧರ ಪಾಲಿನ ಆಶಾದೀಪವಾಗಿ ವೃದ್ಧಾಶ್ರಮ ನಡೆಸುತ್ತಿರುವ ಶಿಲ್ಪಾ ಸರ್ಜಾಪುರ ಅವರನ್ನು ಸನ್ಮಾನಿಸಲಾಯಿತು.

ಶಂಕರಗೌಡ ಪಾಟೀಲರ ಸಹಪಾಠಿ ಕಿರಣ ಶಿಂಧೆ ಅವರು ಒಡನಾಟದ ಅನುಭವಗಳನ್ನು ಹಂಚಿಕೊಂಡರು.
ಸಂಸ್ಥೆಯ ಉಪಾಧ್ಯಕ್ಷೆ ರತ್ನಾ ಪಾಟೀಲ, ಕಾರ್ಯದರ್ಶಿ ಮಹೇಶ ಪಾಟೀಲ, ಸಿಇಒ ಅಕ್ಷತಾ ಪಾಟೀಲ, ಅಮಿತ್ ಪಾಟೀಲ, ಬಸವರಾಜ ಕೆ., ಶಿಕ್ಷಕರು, ವಿದ್ಯಾರ್ಥಿಗಳಿದ್ದರು.

ಕಾವ್ಯಾ ಮಠದ ನಿರೂಪಿಸಿದರು. ಪ್ರವೀಣ ಬ್ಯಾಹಟ್ಟಿ ಸ್ವಾಗತಿಸಿದರು. ಪ್ರಾಚಾರ್ಯ ವಿಕ್ರಂ ಮಹಾಶಬ್ದೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net