ಇಂದು ಅನಾಥರ ಮಾಯಿ ನಾಟಕ ಪ್ರದರ್ಶನ

sindhutai-sapkal 25 JAN 20
Published on

ಬೆಂಗಳೂರು: ಕಡು ಬಡತನದಲ್ಲೇ ಬೆಳೆದು ಕಷ್ಟಗಳನ್ನುಂಡರೂ ಸಮಾಜದ ದುಃಖ ಕಡಿಮೆ ಮಾಡಬೇಕು ಎಂಬ ಸಂಕಲ್ಪದಿಂದ ಅನಾಥ ಮಕ್ಕಳಿಗೆ ಆಶ್ರಯ ನೀಡಲು ಆರಂಭಿಸಿದವರು ಸಿಂಧುತಾಯಿ ಸಪಕಾಳ (ಮಾಯಿ). ಮಹಾರಾಷ್ಟ್ರದ ಪುಣೆ ಬಳಿ ಸೇವೆಯ ಪುಟ್ಟ ಸಾಮ್ರಾಜ್ಯವನ್ನೇ ಕಟ್ಟಿರುವ ಸಿಂಧುತಾಯಿ 1,500ಕ್ಕಿಂತ ಹೆಚ್ಚು ಅನಾಥ ಮಕ್ಕಳಿಗೆ, ಪರಿತ್ಯಕ್ತ ಸ್ತ್ರೀಯರಿಗೆ ಆಶ್ರಯ ನೀಡಿದ್ದಾರೆ.

4ನೇ ತರಗತಿ ಓದಿದರೂ ಸೇವೆಯ ಶಕ್ತಿಯನ್ನು ಮನದಟ್ಟು ಮಾಡಿಸಿ, ಹಲವು ದೇಶಗಳಲ್ಲಿ ಭಾರತೀಯ ಮೌಲ್ಯ ಪ್ರತಿಪಾದಿಸಿ 150ಕ್ಕಿಂತ ಹೆಚ್ಚು ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ಒಬ್ಬ ಸಾಮಾನ್ಯ ಸ್ತ್ರೀ ಇಷ್ಟೆಲ್ಲ ಸಾಧನೆ ಮಾಡಿ ಮಹಾಶಕ್ತಿ ಆಗಲು ಹೇಗೆ ಸಾಧ್ಯವಾಯಿತು? ಈ ಪಯಣ ಹೇಗಿತ್ತು? ಎಂಬ ಪ್ರಶ್ನೆಗಳಿಗೆ ‘ಅನಾಥರ ಮಾಯಿ’ ನಾಟಕದಲ್ಲಿ ಉತ್ತರ ನೀಡಲಾಗಿದೆ.

ಹುಬ್ಬಳ್ಳಿ, ಶಿವಮೊಗ್ಗ, ಮೈಸೂರು ಸೇರಿ ವಿವಿಧೆಡೆ ಪ್ರದರ್ಶಿತವಾಗಿರುವ ಸಿಂಧುತಾಯಿ ಸಪಕಾಳ ಜೀವನಾಧರಿತ ನಾಟಕ ‘ಅನಾಥರ ಮಾಯಿ’ ಶನಿವಾರ (ಜ. 25) ಸಂಜೆ 6ಕ್ಕೆ ಚಾಮರಾಜಪೇಟೆಯ ಶಾರದಾ ಸ್ತ್ರೀ ಸಮಾಜದಲ್ಲಿ ಪ್ರದರ್ಶನಗೊಳ್ಳಲಿದೆ. ಹುಬ್ಬಳ್ಳಿಯ ಸುನಿಧಿ ಕಲಾ ಸೌರಭ ತಂಡ ಪ್ರಸ್ತುತಪಡಿಸಲಿರುವ ಈ ನಾಟಕವನ್ನು ಸುಭಾಷ್ ನರೇಂದ್ರ ನಿರ್ದೇಶಿಸಿದ್ದಾರೆ. ವಿವರಕ್ಕೆ ದೂ: 98452 87171 ಸಂರ್ಪಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net