ಹುಬ್ಬಳ್ಳಿ: ಪುಣೆಯ ಪಿಂಪ್ರಿ ಚಿಂಚವಾಡ ಸೈನ್ಸ್ ಪಾರ್ಕ್ ನಲ್ಲಿ ಅಲ್ಲಿನ ನಮ್ಮವರು ಸಂಘ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಘಟಕದ ವತಿಯಿಂದ ಆಯೋಜಿಸಲಾಗಿರುವ ಕನ್ನಡ ಭಾಷೆ ಹಾಗೂ ಸಾಹಿತ್ಯ ಸಂಭ್ರಮದಲ್ಲಿ ನಗರದ ಸುನಿಧಿ ಕಲಾಸೌರಭ ತಂಡದವರಿಂದ ಆಗಸ್ಟ್ 24ರಂದು ಬೆಳಗ್ಗೆ 10ಕ್ಕೆ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.
ಧಾರವಾಡ ರಂಗಾಯಣ ಮಾಜಿ ನಿರ್ದೇಶಕ ಸುಭಾಸ ನರೇಂದ್ರ ಇವರ ಪರಿಕಲ್ಪನೆ, ರಚನೆ ಹಾಗೂ ನಿರ್ದೇಶನದ "ಅನಾಥರ ಮಾಯಿ' ನಾಟಕ ಪ್ರದರ್ಶನ, ಕನ್ನಡ ಕವಿಗೋಷ್ಠಿ ಹಾಗೂ ಮಕ್ಕಳಿಂದ ವಿವಿಧ ಬಗೆಯ ಸಾಂಸತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ನಮ್ಮವರು ಸಂಸ್ಥಾಪಕ ಬಸವರಾಜ ಹಿರೇಮಠ ತಿಳಿಸಿದ್ದಾರೆ.