ಅನಸೂಯ ಹಂದೆಗೆ ರೈತ ಪುರಸ್ಕಾರ

kota
Published on

ಕೋಟ: ಪಂಚವರ್ಣ ಯುವಕ ಮಂಡಲ, ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ರೈತರೆಡೆಗೆ ನಮ್ಮ ನಡಿಗೆ 45ನೇ ಮಾಲಿಕೆ ಕಾರ್ಯಕ್ರಮ ಶನಿವಾರ ನಡೆಯಿತು. ಈ ವೇಳೆ ಕೋಟತಟ್ಟು ಪಡುಕರೆ ಅನುಸೂಯ ಹಂದೆ ಅವರಿಗೆ ರೈತ ಪುರಸ್ಕಾರ ಪ್ರಶಸ್ತಿ ಪ್ರದಾನಿಸಲಾಯಿತು.

ಗೀತಾನಂದ ಫೌಂಡೇಶನ್, ಗೆಳೆಯರ ಬಳಗ ಕಾರ್ಕಡ, ರೈತಧ್ವನಿ ಸಂಘ ಕೋಟ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಸಹಯೋಗ ವಹಿಸಿದ್ದವು. ಕುಂದಾಪುರ ವಕೀಲರ ಸಂಘದ ಮಾಜಿ ಅಧ್ಯಕ್ಷ ಎಚ್.ಪ್ರಮೋದ್ ಹಂದೆ ದೀಪ ಬೆಳೆಗಿಸಿದರು.

ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ.ಮನೋಹರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ರೈತಧ್ವನಿ ಸಂಘದ ಅಧ್ಯಕ್ಷ ಎಂ.ಜಯರಾಮ, ನಾಗರಾಜ್ ಹಂದೆ, ರವೀಂದ್ರ ಹಂದೆ, ಕೆ.ತಾರಾನಾಥ ಹೊಳ್ಳ, ಲಲಿತಾ ಪೂಜಾರಿ ಉಪಸ್ಥಿತರಿದ್ದರು. ಕಲಾವತಿ ಅಶೋಕ್ ಸ್ವಾಗತಿಸಿದರು. ಸುಜಾತ ಬಾಯರಿ ನಿರೂಪಿಸಿದರು. ಮಹೇಶ್ ಬೆಳಗಾವಿ ವಂದಿಸಿದರು. ರವೀಂದ್ರ ಕೋಟ ಸಂಯೋಜಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net