ಅನನ್ಯಾಗೌಡ ರಾಜ್ಯಕ್ಕೆ ದ್ವೀತೀಯ ಸ್ಥಾನ

6blrp3-ananya gowda
ವಿದ್ಯಾರ್ಥಿನಿ ಅನನ್ಯಾಗೌಡ
Published on

ಬೇಲೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 623 ಅಂಕ ಗಳಿಸಿದ್ದ ಪಟ್ಟಣದ ಸರ್ವೋದಯ ವಿದ್ಯಾಸಂಸ್ಥೆ ವಿದ್ಯಾರ್ಥಿನಿ ಅನನ್ಯಾಗೌಡ, ಮರು ಮೌಲ್ಯ ಮಾಪನದಿಂದ ಹಿಂದಿ ವಿಷಯದಲ್ಲಿ ಹೆಚ್ಚು ಅಂಕ ಗಳಿಸಿ, 625ಕ್ಕೆ 624 ಅಂಕ ಪಡೆದು ರಾಜ್ಯಕ್ಕೆ ದ್ವೀತೀಯ ಸ್ಥಾನ ಪಡೆದಿದ್ದಾರೆ.

2024ರ ಮೇ 9 ರಂದು 2023-2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟವಾದ ಸಂದರ್ಭ 625ಕ್ಕೆ 623 ಅಂಕ ಗಳಿಸಿ ಹಾಸನ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ 3ನೇ ಸ್ಥಾನ ಪಡೆದಿದ್ದ ವಿದ್ಯಾರ್ಥಿನಿ ಅನನ್ಯಾಗೌಡ, ಇನ್ನು ಹೆಚ್ಚಿನ ಅಂಕ ಬರಬೇಕಿತ್ತು ಎಂದು ಮರು ಮೌಲ್ಯ ಮಾಪನ ಮಾಡಿಸಿದಾಗ ಹಿಂದಿ ವಿಷಯದಲ್ಲಿ ಒಂದು ಅಂಕ ಹೆಚ್ಚು ಬಂದಿದೆ. ಆ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು, ಬೇಲೂರು ತಾಲೂಕಿನ ಶೈಕ್ಷಣಿಕ ಕ್ಷೇತ್ರದ ಇತಿಹಾಸದಲ್ಲಿಯೇ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಯಾಗಿ ದಾಖಲೆ ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net