

ಚಿಂಚೋಳಿ: ನೆರೆಯ ತೆಲಂಗಾಣದ ವಿಕರಬಾದ ಜಿಲ್ಲೆಯ ಅನಂತಗಿರಿಯ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಚರ್ತುದಶಿ ನಿಮಿತ್ತ ಶ್ರೀ ಅನಂತಪದ್ಮನಾಭ ಸ್ವಾಮಿಗಳ ಅದ್ಧೂರಿ ಪಲ್ಲಕ್ಕಿ ಉತ್ಸವ ಹಾಗೂ 185 ದಂಪತಿಗಳಿಂದ ಮಹಾಯಾಗ ಜರುಗಿತು.
ದಂಪತಿಗಳಿಂದ ಶ್ರೀ ಅನಂತಪದ್ಮನಾಭ ಸ್ವಾಮಿಗೆ ವಿಶೇಷ ಅಲಂಕಾರ ಮಾಡಿ ವಿವಿಧ ಪೂಜೆಗಳು ನೇರವೇರಿಸಲಾಯಿತು. ಬಳಿಕ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನೇರವೇರಿಸಿದರು. ನಂತರ ಭಕ್ತಾದಿಗಳಿಗೆ ಮಹಾ ಪ್ರಸಾದ ವ್ಯವಸ್ಥೆ ಕಲ್ಪಿಸಲಾಯಿತು.
ಈ ವೇಳೆ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತೆಲಂಗಾಣದ ಹೈದ್ರಾಬಾದ್, ಪರಗಿ, ವಿಕರಬಾದ್ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ ಭಕ್ತರು ದೇವರ ದರ್ಶನ ಪಡೆದು ಪುನಿತರಾದರು. ದೇವಾಲಯದ ಅರ್ಚಕರಾದ ಎನ್.ಪದ್ಮನಾಭ, ದೇವಾಲಯ ಆಡಳಿತ ಮಂಡಳಿ ಮುಖ್ಯಸ್ಥ ನರೇಂದ್ರ ಸೇರಿದಂತೆ ಭಕ್ತಾದಿಗಳು ಇದ್ದರು.