ಅನಂತ್ ಊರುಬೈಲು ಮೂರನೇ ಬಾರಿ ಅಧ್ಯಕ್ಷ

ananth
Published on

ಮಡಿಕೇರಿ

ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಡಳಿತ ಮಂಡಳಿಯ ಅಧ್ಯಕ್ಷರಾಗಿ ಸತತ ಮೂರನೇ ಬಾರಿಗೆ ಅನಂತ್ ಊರುಬೈಲು ಮತ್ತು ಉಪಾಧ್ಯಕ್ಷರಾಗಿ ಯಶವಂತ ದೇವರಗುಂಡ ಅವಿರೋಧವಾಗಿ ಆಯ್ಕೆಯಾದರು.

ಗುರುವಾರ (ಜ.9) ಸಂಪಾಜೆಯ ಸಂಘದ ಕೇಂದ್ರ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಚುನಾವಣಾಧಿಕಾರಿಯಾಗಿ ಸಿದ್ದಲಿಂಗಮೂರ್ತಿ ಕಾರ್ಯ ನಿರ್ವಹಿಸಿದರು. ಡಿ. 29ರಂದು ನಡೆದಿದ್ದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಅನಂತ್ ಊರುಬೈಲು ನೇತೃತ್ವದಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಎಲ್ಲಾ 13 ಅಭ್ಯರ್ಥಿಗಳು ಭಾರಿ ಅಂತರದಿAದ ಗೆಲುವು ಸಾಧಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net