ಅನಂತಕುಮಾರ ಹೆಗಡೆ ಒಬ್ಬ ಮೂರ್ಖ

B Nagendra
Published on

ರಾಯಚೂರು: ಸಂವಿಧಾನ ಬದಲಿಸುವುದಾಗಿ ಹೇಳುತ್ತಿರುವ ಸಂಸದ ಅನಂತಕುಮಾರ ಹೆಗಡೆ ಒಬ್ಬ ಮೂರ್ಖ. ಆತನನ್ನು ಕ್ಷೇತ್ರದ ಜನರು ಹೇಗೆ ಆಯ್ಕೆ ಮಾಡಿದ್ದಾರೋ ಎಂದು ಯುವಜನ ಸೇವೆ ಮತ್ತು ಕ್ರೀಡಾ ಖಾತೆ ಸಚಿವ ಬಿ.ನಾಗೇಂದ್ರ ಹೇಳಿದರು.
ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ರಾಯರ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿ, ಸಂವಿಧಾನ ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಮೂರ್ಖರು ಎಷ್ಟು ಹೇಳಿದರು ಸಂವಿಧಾನ ಬದಲಾಗುವುದಿಲ್ಲ ಎಂದರು.
ಪ್ರಧಾನಿ ಮೋದಿ ಸಂವಿಧಾನದಿಂದಲೇ ನಾನು ಪ್ರಧಾನಿಯಾಗಿದ್ದೇನೆ ಎಂದು ಹೇಳುತ್ತಾರೆ. ಆದರೆ ಅವರ ಪಕ್ಷದ ಸಂಸದ ಸಂವಿಧಾನ ಬದಲಿಸುತ್ತೇವೆ ಅಂತಿದಾರೆ. ಮುಂದಿನ ದಿನಗಳ್ಲಲಿ ಅನಂತಕುಮಾರ ಹೆಗಡೆ ಗೋಬ್ಯಾಕ್ ಎನ್ನುವ ಪರಿಸ್ಥಿತಿ ಬರಲಿದೆ.
ಸಂವಿಧಾನ ಬದಲಾದರೆ ರಕ್ತಪಾತವಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿಕೆಗೆ ಸಂಬಂಸಿದಂತೆ ಸಂವಿಧಾನ ಇಲ್ಲದಿದ್ದರೆ ನೂರಕ್ಕೆ ನೂರರಷ್ಟು ರಕ್ತಪಾತವಾಗುತ್ತದೆ. ಸಂವಿಧಾನ ಬಿಟ್ಟು ನಡೆದುಕೊಳ್ಳುವುದಾದರೆ ನಮಗೆ ವಾಕ್ ಸ್ವಾತಂತ್ರವೂ ಇರುವುದಿಲ್ಲ.
ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಸ್ಥಾನಗಳ್ಲಲಿ ಕಾಂಗ್ರೆಸ್ ಗೆಲುವು ಸಾಸುವ ವಿಶ್ವಾಸವಿದೆ. ಬಳ್ಳಾರಿಯಲ್ಲಿ ಕಾಂಗ್ರೆಸ್‌ನಿಂದ ಯಾರೇ ನಿಂತರೂ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ಪಕ್ಷ ನೀಡಿದೆ. ನನ್ನ ಸಹೋದರ ಟಿಕೆಟ್ ಆಕಾಂಕ್ಷಿಯಾಗಿದ್ದು, ಯಾರಿಗೇ ಟಿಕೆಟ್ ನೀಡಿದರು ಗೆಲ್ಲಿಸಲು ಕೆಲಸ ಮಾಡಲಾಗುವುದು.
ಅಂಜನಾದ್ರಿಗೆ 2 ಸಾವಿರ ಕೋಟಿ ರೂ. ನೀಡಿದರೆ ಬಿಜೆಪಿಗೆ ಬೆಂಬಲಿಸುವುದಾಗಿ ಜನಾರ್ದನರೆಡ್ಡಿ ಹೇಳುತ್ತಾರೆ. 2 ಸಾವಿರ ಕೋಟಿ ರೂ. ನೀಡಿದರೆ ಬಿಜೆಪಿಗೆ ಹೋಗುತ್ತೇನೆ ಎನ್ನುವುದು ಹಾಸ್ಯಾಸ್ಪದವಾಗಿದೆ ಎಂದು ಬಿ.ನಾಗೇಂದ್ರ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net