ಅನಂತ ಹರಿಹರ ಕೊಡುಗೆ ಅಪಾರ

23 vikram 11
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಂಗೀತ ಹಾಗೂ ಸಾಹಿತ್ಯಕ್ಕೆ ಧಾರವಾಡ ಪ್ರಸಿದ್ಧಿ. ಸಂಗೀತ ಕ್ಷೇತ್ರದ ಬೆಳವಣಿಗೆಗೆ ಅನಂತ ಹರಿಹರ ನೀಡಿದ ಕೊಡುಗೆ ಅಪಾರ ಎಂದು ಹಿರಿಯ ಗಾಯಕ ಪಂ. ಗಣಪತಿ ಭಟ್​ ಹಾಸಣಗಿ ಹೇಳಿದರು.
ನಗರದ ಆಲೂರು ವೆಂಕಟರಾವ್​ ಭವನದಲ್ಲಿ ಜಿ.ಬಿ. ಜೋಶಿ ಮೆಮೋರಿಯಲ್​ ಟ್ರಸ್ಟ್​ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳ ಜಂಟಿಯಾಗಿ 3 ದಿನಗಳ ಕಾಲ ಆಯೋಜಿಸಿರುವ "ಅನಂತ ಸ್ವರ ನಮನ' ಸಂಗೀತೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಅನಂತ ಹರಿಹರ ಯುವ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದರು. ಹೀಗಾಗಿ ಅವರ ಮಾರ್ಗದರ್ಶನಲ್ಲಿ ಸಾಕಷ್ಟು ಕಲಾವಿದರಿಗೆ ಉತ್ತಮ ವೇದಿಕೆ ದೊರೆಯುವ ಮೂಲಕ ಸಂಗೀತ ಕ್ಷೇತ್ರದಲ್ಲಿ ಬೆಳೆದಿದ್ದಾರೆ. ಅವರು ಯಾವುದೇ ಅಪೇಕ್ಷೆ ಇಲ್ಲದೆ ಸಂಗೀತಕ್ಕೆ ಸೇವೆ ಸಲ್ಲಿಸಿದ್ದಾರೆ. ಅದೇ ಮಾರ್ಗದಲ್ಲಿ ಯುವ ಕಲಾವಿದರು ಸಾಗಬೇಕು ಎಂದರು.
ಪಂ. ಎಂ. ವೆಂಕಟೇಶಕುಮಾರ ಮಾತನಾಡಿ, ಅನಂತರ ಹರಿಹರ ಅವರಲ್ಲಿ ಸಂಗೀತದ ಬಗ್ಗೆ ಅಪಾರ ಗೌರವ ಹಾಗೂ ಪ್ರೇಮ ಇತ್ತು. ಕಲಾವಿದರನ್ನು ಪ್ರೀತಿಯಿಂದ ಕಾಣುತ್ತಿದ್ದರು. ಅವರ ಮಾರ್ಗದರ್ಶನದಲ್ಲಿ ಸಾಕಷ್ಟು ಯುವ ಕಲಾವಿದರು ಬೆಳೆದಿದ್ದಾರೆ. ಸಂಗೀತ ಕ್ಷೇತ್ರಕ್ಕೆ ಅವರು ನಿಸ್ವಾರ್ಥದಿಂದ ಸೇವೆ ಮಾಡಿದ್ದಾರೆ. ಹೀಗಾಗಿ ಅವರ ಸೇವೆಯ ನೆನಪು ಮರೆಯಲು ಸಾಧ್ಯವಿಲ್ಲ ಎಂದರು.
ಪಂ. ಕೈವಲ್ಯಕುಮಾರ ಗುರವ ಮಾತನಾಡಿ, ಅನಂತ ಹರಿಹರ ಸಂಗೀತಗಾರರಿಗೆ ತಮ್ಮ ಜೀವನ ಮುಡಿಪಾಗಿಟ್ಟಿದ್ದರು. ಕಲಾವಿದರನ್ನು ಪ್ರೋತ್ಸಾಹ ಮಾಡಿ, ಸಂಗೀತ ಕೇಳುಗರ ಸಂಖ್ಯೆ ಹೆಚ್ಚಿಸಿದರು. ಅವರು ಪ್ರತಿ ಕಾರ್ಯಕ್ರಮ ಆಯೋಜಿಸುವ ಮುನ್ನ ಸಂಗೀತದ ಗುಣಮಟ್ಟದ ಬಗ್ಗೆ ವಿಚಾರ ಮಾಡುತ್ತಿದ್ದರು ಎನ್ನುವುದು ವಿಶೇಷ ಎಂದರು.
ಕ್ಷಮತಾ ಸಂಸ್ಥೆ ಸಂಚಾಲಕ ಗೋವಿಂದ ಜೋಶಿ, ಪಂ. ಶ್ರೀನಿವಾಸ ಜೋಶಿ ಮಾತನಾಡಿದರು. ಪಂ. ಶ್ರೀಪಾದ ಹೆಗಡೆ ಕಂಪ್ಲಿ, ಪಂ. ಬಿ.ಎಸ್​. ಮಠ, ಡಾ. ರಮಾಕಾಂತ ಜೋಶಿ, ಡಾ. ಹ.ವೆಂ.ಕಾಖಂಡಿಕಿ, ಸಮೀರ ಜೋಶಿ ಇತರರು, ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net