

ವಿಜಯವಾಣಿ ಸುದ್ದಿಜಾಲ ಕೋಟ
ಗೀತಾನಂದ ಟ್ರಸ್ಟ್ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಸಾಮಾಜಿಕ ಸೇವೆ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯ. ಇಂತಹ ಸೇವೆ ಮುಂದುವರಿಸಿ ಈ ಭಾಗದ ಜನರಿಗೆ ಆಶ್ರಯದಾತರಾಗಿ ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಜಿ.ಶಂಕರ್ ಹೇಳಿದರು.
ಗೀತಾನಂದ ಫೌಂಡೇಶನ್ ಮಣೂರು ಕೋಟ ಆಶ್ರಯದಲ್ಲಿ ಉಚಿತ ನೋಟ್‌ಬುಕ್, ವಿದ್ಯಾರ್ಥಿವೇತನ ಕಂಪ್ಯೂಟರ್, ಬಸ್, ಸ್ಯಾನಿಟರಿ ನ್ಯಾಪ್‌ಕಿನ್ ಬರ್ನರ್ ಹಸ್ತಾಂತರ, ಸಸಿ ವಿತರಣೆ, ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ ‘ಆನಂದೋತ್ಸವ 2024’ವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಡಿಡಿಪಿಐ ಗಣಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಜುಂ, ಕೋಟ ಪಡುಕರೆ ಲಕ್ಷ್ಮೀ ಸೋಮಬಂಗೇರ ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲೆ ಡಾ.ಪ್ರೊ.ಸುನೀತಾ ವಿ., ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಡೆನಿಸ್ ಬಾಂಝಿ, ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ, ಸರ್ಕಾರಿ ಸಂಯುಕ್ತ ಪ್ರೌಢಶಾಲಾ ಮುಖ್ಯಶಿಕ್ಷಕ ನಿರಂಜನ್ ನಾಯಕ್, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಮಂಜುನಾಥ್ ಹೊಳ್ಳ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಯರಾಮ್ ಶೆಟ್ಟಿ, ಪ್ರಾಥಮಿಕ ಶಾಲಾ ವಿಭಾಗದ ನಾಗರಾಜ್, ಕೋಟ ಮೊಗವೀರ ಸಂಘದ ಅಧ್ಯಕ್ಷ ರಂಜಿತ್ ಕುಮಾರ್, ಗೀತಾನಂದ ಟ್ರಸ್ಟ್ ನಿರ್ದೇಶಕ ರಕ್ಷತ್ ಕುಂದರ್,ದಿವ್ಯಲಕ್ಷ್ಮೀ ಪ್ರಶಾಂತ್ ಕುಂದರ್, ಕೋಟತಟ್ಟು ಗ್ರಾಪಂ ಅಧ್ಯಕ್ಷ ಸತೀಶ್ ಕುಂದರ್, ವಾಹಿನಿ ಯುವಕ ಮಂಡಲ ಅಧ್ಯಕ್ಷ ರಮೇಶ್ ಎಚ್.ಕುಂದರ್ ಮತ್ತಿತರರು ಇದ್ದರು.
ಗೀತಾನಂದ ಫೌಂಡೇಶನ್ ಮಣೂರು ಪ್ರವರ್ತಕ ಆನಂದ್ ಸಿ.ಕುಂದರ್ ಅಧ್ಯಕ್ಷತೆ ವಹಿಸಿ ಪ್ರಸ್ತಾವನೆ ಸಲ್ಲಿಸಿದರು. ಸಹ ಶಿಕ್ಷಕ ರಾಮದಾಸ್ ನಾಯಕ್ ಸ್ವಾಗತಿಸಿ, ಜನತಾ ಸಂಸ್ಥೆ ಸಿಬ್ಬಂದಿ ಮಮತಾ ನಿರೂಪಿಸಿದರು. ಪ್ರೌಢಶಾಲಾ ಸಹಶಿಕ್ಷಕ ಶ್ರೀಧರ ಶಾಸ್ತ್ರಿ ವಂದಿಸಿದರು.
ಮತ್ಸೊದ್ಯಮಿ ಆನಂದ್ ಸುವರ್ಣ ಹಾಗೂ ಕರ್ಣಾಟಕ ಬ್ಯಾಂಕ್ ಎಜಿಎಂ ವಾದಿರಾಜ್.ಕೆ ಅವರನ್ನು ಸನ್ಮಾನಿಸಲಾಯಿತು. 35 ಲಕ್ಷ ರೂ. ವೆಚ್ಚದಲ್ಲಿ 40 ಶಾಲೆಗಳ 5 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್, ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ, ಮಣೂರು ಪ್ರೌಢಶಾಲೆ, ಪದವಿಪೂರ್ವ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ, ಪ್ರೋತ್ಸಾಹ ಧನ ಮತ್ತು ಶೇ.100 ಫಲಿತಾಂಶಕ್ಕೆ ಕಾರಣೀಕರ್ತರಾದ ಶಿಕ್ಷಕರನ್ನು, ಬಿಸಿಯೂಟ ಸಹಾಯಕಿಯರನ್ನು ಸನ್ಮಾನಿಸಲಾಯಿತು.
ಮೊಗವೀರ ಯುವ ಸಂಘ ಉಡುಪಿ ಜಿಲ್ಲಾಧ್ಯಕ್ಷ ಜಯಂತ್ ಅಮೀನ್ ಸಮವಸ್ತ್ರ ಹಸ್ತಾಂತರಿಸಿದರು. ಕೋಟತಟ್ಟು ಗ್ರಾಪಂ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಮಣೂರು ಶಾಲೆಗೆ, ಕೋಟ ಪಿಡಿಒ ಸುರೇಶ್ ಬಂಗೇರ ಹೆಸ್ಕತ್ತೂರ್ ಶಾಲೆ, ಕೋಟ ಸಿಎ ಬ್ಯಾಂಕ್ ಅಧ್ಯಕ್ಷ ಡಾ.ಕೆ.ಕೃಷ್ಣ ಕಾಂಚನ್ ಕೋಟತಟ್ಟು ಗ್ರಾಪಂಗೆ ಕಂಪ್ಯೂಟರ್ ಹಸ್ತಾಂತರಿಸಿದರು. ಮತ್ಸೊದ್ಯಮಿ ಆನಂದ್ ಸುವರ್ಣ ಮಲ್ಪೆ ಹಾಗೂ ಕರ್ಣಾಟಕ ಬ್ಯಾಂಕ್ ಶಾಲೆಗೆ ಒಂದೊಂದು ಬಸ್ ನೀಡಿದ್ದು ಅದನ್ನು ಹಸ್ತಾಂತರಿಸಲಾಯಿತು.