

ಕೋಟ: ಪುರಾಣ ಪ್ರಸಿದ್ಧ ಕೋಟದ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಳದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಆನಂದ್ ಸಿ. ಕುಂದರ್ ಪುನರಾಯ್ಕೆಯಾಗಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಆರ್, ಶೇಷಪ್ಪ ಉಪಸ್ಥಿತಿಯಲ್ಲಿ ಬುಧವಾರ ಅಪರಾಹ್ನ ದೇವಳದಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಕಳೆದ ಹಲವಾರು ವರ್ಷಗಳಿಂದ ದೇವಳದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮಾಜಿ ಅಧ್ಯಕ್ಷ ಆನಂದ್ ಸಿ. ಕುಂದರ್ ಅವರನ್ನು ಸದಸ್ಯ ಜಿ. ಸತೀಶ್ ಹೆಗ್ಡೆ ಸೂಚಿಸಿದರು. ಎಂ.ಸುಬ್ರಾಯ ಆಚಾರ್ಯ ಅನುಮೋದಿಸಿದರು.
ದೇವಳದ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ತಹಸೀಲ್ದಾರ್ ಕಿರಣ್ ಗೌರಯ್ಯ ಗುರುವಾರ ಅಧಿಕಾರ ಹಸ್ತಾಂತರಿಸಿದರು. ಸದಸ್ಯ ಚಂದ್ರ ಪೂಜಾರಿ ಕದ್ರಿಕಟ್ಟು ಸ್ವಾಗತಿಸಿದರು. ನೂತನ ಸದಸ್ಯರಾದ ಸತೀಶ್ ಹೆಗ್ಡೆ, ಕೋಟ ಗ್ರಾಮಲೆಕ್ಕಿಗ ಚೆಲುವರಾಜು, ಸಹಾಯಕ ರಾಜು ಮರಕಾಲ, ಸುಬ್ರಾಯ ಆಚಾರ್ಯ, ಅರ್ಚಕ ಪ್ರತಿನಿಧಿ ಸುಬ್ರಾಯ ಜೋಗಿ ದೇವಳದ ಸಿಬ್ಬಂದಿ ಉಪಸ್ಥಿತರಿದ್ದರು.