

ಕವಿತಾಳ: ಸಮೀಪದ ಆನಂದಗಲ್ ಗ್ರಾಮದಲ್ಲಿ ಶವಸಂಸ್ಕಾರಕ್ಕೆ ಅಡ್ಡಿಪಡಿಸಿದ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಸಂಗ ಸೋಮವಾರ ನಡೆಯಿತು.
ಇದನ್ನೂ ಓದಿ: ದೇವಸ್ಥಾನ ಜಾಗದಲ್ಲಿ ಶವ ಸಂಸ್ಕಾರ ಬೇಡ
ಭೋವಿ ಸಮಾಜದ ರಂಗಮ್ಮ ಹನುಮಂತ ಎನ್ನುವ ಮಹಿಳೆ ನಿಧನರಾಗಿದ್ದು, ಅಂತ್ಯಸಂಸ್ಕಾರಕ್ಕಾಗಿ ಸರ್ವೇ ನಂ.7ರಲ್ಲಿ ಕುಣಿ ಅಗೆದಾಗ ಅಲ್ಲಿನ ರೈತರು ತಡೆದಿದ್ದಾರೆ. ಈ ವೇಳೆ ಮೃತ ಮಹಿಳೆಯ ಕುಟುಂಬ ಸದಸ್ಯರು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು.
ಬಳಿಕ ಮೃತರ ಸಂಬಂಧಿಕರು ಠಾಣೆಗೆ ದೂರು ನೀಡಿದ್ದು, ಪಿಎಸ್‌ಐ ವೆಂಕಟೇಶ ನಾಯಕ, ಕಂದಾಯ ನಿರೀಕ್ಷಕ ಶರಣೇಗೌಡ, ಗ್ರಾಮ ಲೆಕ್ಕಾಧಿಕಾರಿ ರವಿ ಘಟನಾ ಸ್ಥಳಕ್ಕೆ ಸಮಸ್ಯೆ ಆಲಿಸಿದರು. ಬಳಿಕ ಗ್ರಾಮ ಲೆಕ್ಕಾಧಿಕಾರಿ ಅವರು ಮಸ್ಕಿ ತಹಸೀಲ್ದಾರ್‌ಗೆ ಕರೆ ಮಾಡಿ ಮಾಹಿತಿ ನೀಡಿದರು.
ಈ ವೇಳೆ ತಹಸೀಲ್ದಾರ್ ಮಲ್ಲಪ್ಪ ಯರಗೋಳ ಅವರು ಫೋನ್‌ನಲ್ಲೇ ಪಟ್ಟಾದಾರ ರೈತರೊಂದಿಗೆ ಮಾತನಾಡಿ , ನಾನು ಬೆಂಗಳೂರಿಗೆ ಬಂದಿದ್ದು, ಇನ್ನೆರಡು ದಿನದಲ್ಲಿ ಗ್ರಾಮಕ್ಕೆ ಬಂದು ಸಭೆ ನಡೆಸಿ ಸಮಸ್ಯೆ ಬಗೆಹರಿಸುತ್ತೇನೆ. ಅಲ್ಲಿಯವರೆಗೆ ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿದಂತೆ ತಿಳಿಸಿದ್ದಾರೆ. ಅಧಿಕಾರಿಯ ಮಾತಿಗೆ ಒಪ್ಪಿದ ರೈತರು ಅಂತ್ಯಕ್ರಿಯೆಗೆ ಅವಕಾಶ ನೀಡಿದರು.