ಗನ್ ಸಮೇತ ವಿಮಾನ ನಿಲ್ದಾಣಕ್ಕೆ ಬಂದ ಮಾಜಿ ಸಚಿವ ಪೊಲೀಸರ ಕೈಗೆ ಸಿಕ್ಕಿಬಿದ್ರು!

Anand Asnotikar
Published on

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗನ್​ ಸಮೇತ ಬಂದ ಮಾಜಿ ಸಚಿವರೊಬ್ಬರನ್ನು ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ ಪೊಲೀಸ್​ ವಿಚಾರಣೆಗೆ ಒಳಪಡಿಸಿದ್ದ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ.

ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಅವರು ಬ್ಯಾಗ್​ನಲ್ಲಿ ಗನ್​ ಇಟ್ಟುಕೊಂಡು ಏರ್​ಪೋರ್ಟ್​ ಪ್ರವೇಶಿಸಿದ್ದರು. ಈ ವೇಳೆ ಅವರು ಗನ್ ಬಗ್ಗೆ ಎಂಟ್ರಿ ಮಾಡಿಸಿರಲಿಲ್ಲ. ತಪಾಸಣೆ ವೇಳೆ ಬ್ಯಾಗ್​ನಲ್ಲಿ ಗನ್​ ಪತ್ತೆಯಾಗುತ್ತಿದ್ದಂತೆ ಗಾಬರಿಗೊಂಡ ಏರ್​ಪೋರ್ಟ್ ಭದ್ರತಾ ಸಿಬ್ಬಂದಿ, ಕೂಡಲೇ ಆನಂದ್ ಆಸ್ನೋಟಿಕರ್​ರನ್ನು ಪೊಲೀಸರಿಗೆ ಒಪ್ಪಿಸಿದರು. ಇದನ್ನೂ ಓದಿರಿ ಪಕ್ಷಾಂತರ ಗುಮ್ಮ ಮತ್ತೆ ಬಂತು! ಜೆಡಿಎಸ್​ ತೊರೆದು ‘ಕೈ’ ಹಿಡಿಯಲು ಕ್ಷಣಗಣನೆ

ವಿಚಾರಣೆ ವೇಳೆ ಏರ್​ಪೋರ್ಟ್ ಠಾಣೆ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡ ಅಸ್ನೋಟಿಕರ್, "ಸರ್.. ಅರ್ಜೆಂಟ್ ಇತ್ತು. ಹೀಗಾಗಿ ಗನ್ ಇರುವುದನ್ನು ಮರೆತೆ. ತಪ್ಪಾಯಿತು" ಎಂದರು. ಈ ಗನ್​ಗೆ ಲೈಸನ್ಸ್​ ಇರುವುದು ವಿಚಾರಣೆ ವೇಳೆ ದೃಢಪಟ್ಟಿದೆ. ಸದ್ಯ ಏರ್​ಪೋರ್ಟ್ ಪೊಲೀಸರು ಅಸ್ನೋಟಿಕರ್​ರ ಹೇಳಿಕೆ ದಾಖಲಿಸಿಕೊಂಡು ಕೆಲ ಹೊತ್ತಿನಲ್ಲೇ ಅವರನ್ನು ಬಿಟ್ಟು ಕಳುಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net