

ಹೊಳೆನರಸೀಪುರ: ಕರಪತ್ರ ಹಾಗೂ ಬ್ಯಾನರ್‌ಗಳಲ್ಲಿ ಹೆಸರು ಮತ್ತು ಭಾವಚಿತ್ರ ಬಯಸದೆ ಶೋಷಿತರ ಪರವಾದ ಚಳವಳಿಗಳಲ್ಲಿ ಪ್ರಾಮಾಣಿಕವಾಗಿ ಪಾಲ್ಗೊಳ್ಳುತ್ತಿದ್ದ ಕೊಂಗಲುಬೀಡು ಆನಂದ್ ನಿಷ್ಠಾವಂತ ಕಾರ್ಯಕರ್ತ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ.ಸೋಮಶೇಖರ್ ಹೇಳಿದರು.
ಹೃದಯಘಾತದಿಂದ ನಿಧನರಾದ ಕೋಂಗಲಬೀಡು ಆನಂದ್ ಅವರಿಗೆ ದಲಿತ ಸಂಘರ್ಷ ಸಮಿತಿ ದಂಡೋರ ರಿಸರ್ವೇಷನ್ ಹೋರಾಟ ಸಮಿತಿ ಹಾಗೂ ಪ್ರಗತಿಪರ ಸಂಘ ಸಂಸ್ಥೆಗಳಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಹಾಗೂ ನುಡಿ ನಮನ ಸಭೆಯಲ್ಲಿ ಮಾತನಾಡಿದ ಅವರು, ಆನಂದ್ ಅವರ ನಿಧನ ಸಮುದಾಯ, ಸಮಾಜಕ್ಕೆ ನಷ್ಟ ಉಂಟು ಮಾಡಿದೆ ಎಂದು ಕಂಬನಿ ಮಿಡಿದರು.
ನಿವೃತ್ತ ಪ್ರೊಫೆಸರ್ ಅತ್ನಿ ಮಹದೇವ್, ದಂಡೋರ ರಿಸೆರ್ವೆಷನ್ ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ಟಿ.ಆರ್.ವಿಜಯಕುಮಾರ್ ಮಾತನಾಡಿದರು. ಭಾರತೀಯ ಬೌದ್ಧ ಮಹಾಸಭಾದ ದೇವರಾಜು, ಡಾ.ವೆಂಕಟೇಶ್ ಮೂರ್ತಿ, ಬಹುಜನ ಚಳುವಳಿಯ ತಾರೇಶ್, ದಲಿತ ಚಳವಳಿ ಮುಖಂಡರಾದ ಚಿನ್ನಸ್ವಾಮಿ, ವರ್ಮನ್ ಮತ್ತು ಮಲ್ಲೇಶ್, ಕಾಂಗ್ರೆಸ್ ಮುಖಂಡರಾದ ಎಚ್.ಟಿ.ಲಕ್ಷ್ಮಣ್ ದಲಿತ ಚಳವಳಿಯ ವಾಸು, ಆನಂದ್, ಚಂದ್ರಶೇಖರ್, ಕುಮಾರ್ ಇತರರಿದ್ದರು.