ಆನಂದ ಸಿ.ಕುಂದರ್‌ಗೆ ಕೀರ್ತಿ ಕಲಶ ಪುರಸ್ಕಾರ

ananda
Published on

ಕೋಟ: ಮೂಡುಗಿಳಿಯಾರು ಜನಸೇವಾ ಟ್ರಸ್ಟ್ ವತಿಯಿಂದ ನೀಡಲಾಗುವ ‘ಕೀರ್ತಿ ಕಲಶ’ ಪುರಸ್ಕಾರಕ್ಕೆ ಹಿರಿಯ ಉದ್ಯಮಿ, ಸಾಮಾಜಿಕ ಹಾಗೂ ಧಾರ್ಮಿಕ ಚಿಂತಕ ಆನಂದ ಸಿ.ಕುಂದರ್ ಅವರನ್ನು ಆಯ್ಕೆ ಮಾಡಲಾಗಿದೆ. ಫೆ.15ರಂದು ಸಂಜೆ 6ಗಂಟೆಗೆ ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ನಡೆಯುವ ಅಭಿಮತ ಸಂಭ್ರಮ -2025ರ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಸಮಾಜದ ಆಗು-ಹೋಗುಗಳಿಗೆ ಸ್ಪಂದಿಸಿ ಸಮಾಜಮುಖಿ, ಜನಪರ ಕಾರ್ಯಗಳ ಮೂಲಕ ಗುರುತಿಸಿಕೊಂಡು ಜನಮಾನಸದಲ್ಲಿ ಸ್ಥಾಪಿತರಾಗಿರುವ ಸಾಧಕರನ್ನು ಜನಸೇವಾ ಟ್ರಸ್ಟ್ ವತಿಯಿಂದ ಪ್ರತೀವರ್ಷ ಕೀರ್ತಿ ಕಲಶ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net