ಗುರುಕೃಪೆಯುಳ್ಳ ಸಂಪನ್ನ ಹುಡುಗ ಆನಂದ

15 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ತಬಲಾ ಆನಂದ ಸಂಪನ್ನ ಹುಡುಗ. ಅವನಿಗೆ ಒಳ್ಳೆಯದಷ್ಟೆ ಗೊತ್ತಿತ್ತು. ಅವನು ನಮ್ಮನ್ನಗಲಿ 10 ವರ್ಷಗಳು ಗತಿಸಿವೆ. ಸಂಗೀತ ಸೇವೆ ಮಾಡಲು ನೆನಪು ಅನ್ನುವಂತಹ ವೇದಿಕೆ ಮಾಡಿಕೊಟ್ಟು ಹೋಗಿದ್ದಾನೆ. ನಾವೆಲ್ಲರೂ ಸಂಗೀತದ ಆರಾಧನೆ ಮಾಡುತ್ತ ಅವನನ್ನು ಸ್ಮರಿಸೋಣ ಎಂದು ಗಾಯಕ ಪಂ. ಎಂ ವೆಂಕಟೇಶಕುಮಾರ ಹೇಳಿದರು.
ಇಲ್ಲಿನ ತೇಜಸ್ವಿನಗರದಲ್ಲಿ ಆನಂದ ಅಂಬೇಕರ 10ನೇ ವರ್ಷದ ಪುಣ್ಯಸ್ಮರಣೆ ನಿಮಿತ್ತ ಇತ್ತೀಚೆಗೆ ಏರ್ಪಡಿಸಿದ್ದ ನೆನಪು ಸಮಾರಂಭದಲ್ಲಿ ಅವರು ಮಾತನಾಡಿದರು.
ಬಳಿಕ ಪಂ. ಎಂ. ವೆಂಕಟೇಶಕುಮಾರ ಅವರು ಗಾಯನ, ಶಿವಾನಿ ಕವಠೇಕರ ಗಾಯನ ಪ್ರಸ್ತುತಪಡಿಸಿದರು. ಪ್ರದ್ಯುಮ್ನ ಕರ್ಪೂರ ತಬಲಾ ಸೋಲೊ ಪ್ರಸ್ತುತಪಡಿಸಿದರು. ಸಹಕಲಾವಿದರಾಗಿ ಉದಯರಾಜ ಕರ್ಪೂರ, ಗುರುರಾಜ ಹೆಗಡೆ ತಬಲಾ ಹಾಗೂ ಸತೀಶ ಭಟ್ಟ ಹೆಗ್ಗಾರ ಹಾರ್ಮೋನಿಯಂ ಸಾಥ್ ನೀಡಿದರು.
ಹಿರಿಯ ಸಂಘಟಕ ಅನಂತ ಹರಿಹರ ಅವರನ್ನು ಸನ್ಮಾನಿಸಲಾಯಿತು. ಪಂ. ರಾಚಯ್ಯ ಹಿರೇಮಠ, ಪಂ. ಶಾಂತಾರಾಮ ಹೆಗಡೆ, ಪಂ. ಮಲ್ಲಿಕಾರ್ಜುನ ತರ್ಲಘಟ್ಟ, ಪಂ. ಶ್ರೀನಿವಾಸ ಜೋಶಿ, ಪಂ. ಶ್ರೀಕಾಂತ ಕುಲಕರ್ಣಿ, ಪಂ. ರವೀಂದ್ರ ಯಾವಗಲ್, ಶುಭಾಂಗಿ ಜಾಧವ, ಶಶಿಧರ ನರೇಂದ್ರ, ರಮೇಶ ನಾಡಗೀರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net