ಇಬ್ಬರು ಲೇಖಕರಿಗೆ ಅ.ನ.ಕೃ. ಪ್ರಶಸ್ತಿ

Anakru
Published on

ಬೆಂಗಳೂರು: ಅ.ನ.ಕೃ. ಪ್ರತಿಷ್ಠಾನ ನೀಡುವ 2022 ಮತ್ತು 2023ನೇ ಸಾಲಿನ ಅ.ನ.ಕೃ. ಪ್ರಶಸ್ತಿಗೆ ಕ್ರಮವಾಗಿ ಲೇಖಕರಾದ ಎಸ್.ಆರ್. ರಾಮಸ್ವಾಮಿ ಹಾಗೂ ಬಿ.ಎಸ್. ಸ್ವಾಮಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ತಲಾ 50 ಸಾವಿರ ರೂ., ನಗದು ಒಳಗೊಂಡಿದೆ.

ಎಸ್.ಆರ್. ರಾಮಸ್ವಾಮಿ ಉತ್ಥಾನ ಪತ್ರಿಕೆಯ ಗೌರವ ಸಂಪಾದಕರಾಗಿದ್ದಾರೆ. ಬಿ.ಎಸ್. ಸ್ವಾಮಿ ಆಕಾಶವಾಣಿಯಲ್ಲಿ ಕಾರ್ಯಕ್ರಮ ಸಂಯೋಜಕರಾಗಿ ಕಾರ್ಯನಿರ್ವಹಿಸಿ, ನಿವೃತ್ತರಾಗಿದ್ದಾರೆ. ಮೇ 19ರಂದು ಬಸವನಗುಡಿಯ ನ್ಯಾಷನಲ್ ಕಾಲೇಜು ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಹಿರಿಯ ಪತ್ರಕರ್ತ ರವೀಂದ್ರ ಭಟ್ಟ, ವಕೀಲ ಅಶೋಕ್ ಹಾರನಹಳ್ಳಿ, ವಿದ್ವಾಂಸ ಶತಾವಧಾನಿ ಆರ್. ಗಣೇಶ್ ಹಾಗೂ ಲೇಖಕ ಬಂಡ್ಲಹಳ್ಳಿ ವಿಜಯಕುಮಾರ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಎ.ಕೆ. ಗೌತಮ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net