

ರಟ್ಟಿಹಳ್ಳಿ: ಜಮೀನಿನ ದನದ ಕೊಟ್ಟಿಗೆಯಲ್ಲಿ ಕಟ್ಟಿದ್ದ 90 ಸಾವಿರ ರೂ. ಮೌಲ್ಯದ ಎರಡು ಆಕಳುಗಳನ್ನು ಯಾರೋ ಕಳ್ಳತನ ಮಾಡಿದ ಘಟನೆ ತಾಲೂಕಿನ ಅಣಜಿ ಗ್ರಾಮದಲ್ಲಿ ನಡೆದಿದೆ.
ಪ್ರವಿಣ ಬಸಪ್ಪ ಹುಚ್ಚನವರ (35) ಎಂಬುವರ ಆಕಳು ಕಳ್ಳತನ ಆಗಿರುವುದು.
ಇವರು ಜಮೀನಿನ ದನದ ಕೊಟ್ಟಿಗೆಯಲ್ಲಿ ಆಕಳಗಳನ್ನು ಕಟ್ಟಿದ್ದರು. ಆದರೆ, ಯಾರೋ ಖದೀಮರು ರಾತ್ರಿ ಸಮಯದಲ್ಲಿ ಆಕಳುಗಳನ್ನು ಕಳ್ಳತನ ಮಾಡಿದ್ದಾರೆ. ಈ ಕುರಿತು ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.