

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಸ್ವರ ಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಿ0ದ ಇಲ್ಲಿನ ಆಲೂರು ವೆಂಕಟರಾವ್ ಸಾಂಸ್ಕೃತಿಕ ಸಭಾಭವನದಲ್ಲಿ ಏ. 20ರಂದು ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ `ಅನಾಹತ' ವಾರ್ಷಿಕ ಸಂಗೀತೋತ್ಸವ ಆಯೋಜಿಸಲಾಗಿದೆ. ಸಿತಾರ ವಾದಕ ಪಂ. ಶ್ರೀನಿವಾಸ ಜೋಶಿ, ಹಿಂದುಸ್ತಾನಿ ಗಾಯಕ ಪಂ. ಅಶೋಕ ನಾಡಿಗೇರ, ತಬಲಾ ವಾದಕ ಪಂ. ರಾಚಯ್ಯ ಹಿರೇಮಠ, ಸಿತಾರ ವಾದಕ ಉಸ್ತಾದ್ ಶಫೀಕ್‌ಖಾನ್ ಅವರಿಗೆ ಗೌರವ ಸನ್ಮಾನಿಸಲಾಗುವುದು. ನಂತರ ವಿವಿಧ ಕಲಾವಿದರಿಂದ ಗಾಯನ, ತಬಲಾ ತರಂಗ, ಸಿತಾರ ಸಿಂಚನ, ತಬಲಾ ಸೋಲೋ, ತಬಲಾ ನಿನಾದ, ಸ್ವರ ಸೌರಭ, ಹಿಂದುಸ್ತಾನಿ ಸಂಗೀತ, ಸಿತಾರ ಲಹರಿ, ತಾಳ ವೈಭವ, ತಬಲಾ ಝೇಂಕಾರ, ದಾಸ ಲಹರಿ, ಸ್ವರ- ಲಯ ಝೇಂಕಾರ, ಸಿತಾರ ದ್ವಂದ್ವ ವಾದನ, ಸಿತಾರ ಸೋಲೋ, ಹಿಂದುಸ್ತಾನಿ ಗಾಯನ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.