

ಶಿಗ್ಗಾಂವಿ: ತಾಲೂಕಿನ ಅಂದಲಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮಹಮ್ಮದಜಾಫರ್ ಯಡಹಳ್ಳಿ, ಉಪಾಧ್ಯಕ್ಷೆಯಾಗಿ ರತ್ನವ್ವ ಓಲೇಕಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
12 ಸದಸ್ಯರ ಬಲ ಹೊಂದಿರುವ ಅಂದಲಗಿ ಗ್ರಾಪಂನ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ‘ಬ’ ವರ್ಗ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಮಹಮ್ಮದಜಾಫರ್ ಯಡಹಳ್ಳಿ, ಉಪಾಧ್ಯಕ್ಷ ಸ್ಥಾನಕ್ಕೆ ರತ್ನವ್ವ ಓಲೇಕಾರ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾಯಿತು ಎಂದು ಚುನಾವಣಾಧಿಕಾರಿ ಸಹಾಯಕ ಕೃಷಿ ನಿರ್ದೇಶಕ ಸುರೇಶಬಾಬು ದೀಕ್ಷಿತ್ ಘೊಷಿಸಿದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಸನ್ಮಾನಿಸಲಾಯಿತು.
ಗ್ರಾಪಂ ಸದಸ್ಯರಾದ ವಿನೋದಾ ಕಲಗುದರಿ, ವೀರಭದ್ರಗೌಡ ಪಾಟೀಲ, ಫಾತಿಮಾ ಜೇಕಿನಕಟ್ಟಿ, ಈರಪ್ಪ ಚಲವಾದಿ, ಹನುಮವ್ವ ಓಲೆಕಾರ, ಪ್ರೇಮವ್ವ ಕಲ್ಲಾಪುರ, ಗಂಗಾಧರಗೌಡ ಪಾಟೀಲ, ಶೇಖಪ್ಪ ಜವಳಿ, ಪ್ರತಾಪಸಿಂಗ್ ಮಿಶ್ರಿಕೋಟಿ, ಹಿರಿಯ ವಕೀಲರಾದ ಎಸ್.ಕೆ. ಅಕ್ಕಿ, ಗ್ರಾಮಸ್ಥರಾದ ಶಿವಪುತ್ರಪ್ಪ ಜವಳಿ, ಬಾಷಾಸಾಬ್ ರ್ದಜಿ, ಕಲವೀರಪ್ಪ ಆಲಂಶೆಟ್ರ, ಮೆಹಬೂಬಸಾಬ್ ಬಳಿಗಾರ, ಪರ್ವತಗೌಡ್ರ ಪಾಟೀಲ, ಮಹಮ್ಮದಹುಸೇನ್ ಯಡಹಳ್ಳಿ, ರಾಜಪ್ಪ ಜಾಗಟೆ, ಯಲ್ಲಪ್ಪ ವಾಲೀಕಾರ, ಪಿಡಿಒ ರಾಜಶೇಖರ ಹರಿಜನ ಹಾಗೂ ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.