

ಮಾಯಕೊಂಡ: ಸಮೀಪದ ಅಣಬೇರು ಗ್ರಾಮದಲ್ಲಿ ಜಲಜೀವನ್ ಮಿಷನ್ (ಮನೆಮನೆ ಗಂಗೆ) ಕಾಮಗಾರಿಗೆ ಬುಧವಾರ ಗ್ರಾಪಂ ಅಧ್ಯಕ್ಷ ಓಂಕಾರಪ್ಪ ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಪಂಚಾಯಿತಿ ವ್ಯಾಪ್ತಿಯ ನಲ್ಕುಂದ ಹಾಗೂ ಶಂಕರನಹಳ್ಳಿ ಗ್ರಾಮಗಳಲ್ಲಿ ಈಗಾಗಲೇ ಜೆಜೆಎಂ ಕಾಮಗಾರಿ ಪೂರ್ಣಗೊಂಡಿದ್ದು, ಅಣಬೇರು ಗ್ರಾಮದಲ್ಲಿ ಚಾಲನೆ ನೀಡಲಾಗಿದೆ ಎಂದರು.
ಅಣಬೇರು ಸುಮಾರು 800 ಮನೆ ಹೊಂದಿದ್ದು, ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿದೆ. 9 ಜನ ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ.
ಗ್ರಾಮದಲ್ಲಿ ಮನೆಮನೆ ಗಂಗೆಯ ಸಮರ್ಪಕ ಪೈಪ್ಲೈನ್ ಮತ್ತು ನಲ್ಲಿಗಳನ್ನು ಅಳವಡಿಸಿದರೆ ಪ್ರತಿ ಮನೆಗೂ ನೀರು ಪೂರೈಕೆ ಮಾಡಲು ಅನುಕೂಲವಾಗುತ್ತದೆ ಎನ್ನುತ್ತಾರೆ ಗ್ರಾಪಂ ಸದಸ್ಯರು.
ಗ್ರಾಪಂ ಪಿಡಿಒ ವಿದ್ಯಾವತಿ, ಸದಸ್ಯರಾದ ಜಿ.ಎಂ.ಅನಿಲ್ ಕುಮಾರ್ ಮಾದೇವಪ್ಪ, ರುದ್ರಪ್ಪ, ಎಂ ಕೊಟ್ರಪ್ಪ ಹಾಗೂ ಗ್ರಾಮಸ್ಥರು ಇದ್ದರು.