ಬೇಲೂರು ಕೈಗಾರಿಕೆಯಲ್ಲಿ ಬಗೆಹರಿಯದಷ್ಟು ಸಮಸ್ಯೆ

6 Dwd 1A
Published on

ಮಂಜುನಾಥ ಎಸ್. ಅಂಗಡಿ ಧಾರವಾಡ
ಜಿಲ್ಲೆಯ ಪ್ರಮುಖ ಕೈಗಾರಿಕಾ ಪ್ರದೇಶವಾಗಿರುವ ಬೇಲೂರು ಇಂಡಸ್ಟ್ರಿ. 1986ರಲ್ಲಿ ಆರಂಭವಾದ ಕೈಗಾರಿಕಾ ಪ್ರದೇಶದಲ್ಲಿ ಬಗೆಹರಿಯದಷ್ಟು ಸಮಸ್ಯೆಗಳಿವೆ. ಈವರೆಗೂ ಕೈಗಾರಿಕಾ ಪ್ರದೇಶದ ಕೆಜೆಪಿ ಆಗದಿರುವುದು ಆಶ್ಚರ್ಯದ ಸಂಗತಿ. ಇದರಿಂದ ಮೂಲ ಉತಾರದಲ್ಲಿ ಸಂಬAಧಪಟ್ಟ ಕೈಗಾರಿಕೆಯವರ ಹೆಸರು ಬಾರದೆ ಕೆಐಎಡಿಬಿ ಹೆಸರು ಬರುತ್ತಿರುವುದಿಂದ ಕೈಗಾರಿಕೆಗಳ ಮೇಲೆ ಸಾಲ ಪಡೆದು ಉದ್ಯಮಗಳನ್ನು ನಡೆಸುವ ಕೈಗಾರಿಕೋದ್ಯಮಿಗಳಿಗೆ ತೊಂದರೆಯಾಗುತ್ತಿದೆ.
ಕೈಗಾರಿಕಾ ಪ್ರದೇಶದ ಕೆಜೆಪಿಗೆ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ದಶಕಗಳಿಂದ ಸ್ಪಂದನೆ ಸಿಕ್ಕಿಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿಗಳಿAದ ನೀಡಲಾಗುತ್ತಿರುವ ಇ- ಸ್ವತ್ತು ಪ್ರಮಾಣ ಪತ್ರಗಳನ್ನು ಕೆಐಎಡಿಬಿಯಿಂದ ನೀಡುವ ವ್ಯವಸ್ಥೆಯಾಗಬೇಕು. ಜೊತೆಗೆ ಬೇಲೂರು ಕೈಗಾರಿಕಾ ಪ್ರದೇಶವನ್ನು ಕೈಗಾರಿಕಾ ಟೌನ್‌ಶಿಪ್ ಕಾಯ್ದೆಗೆ ಒಳಪಡಿಸಬೇಕು ಎಂಬುದು ಕೈಗಾರಿಕೋದ್ಯಮಿಗಳ ಬೇಡಿಕೆ.
ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಟಾಟಾ ಹಿಟಾಚಿ, ಟಾಟಾ ಮಾರ್ಕೋಪೋಲೊ, ಟಾಟಾ ಮೋಟರ್ಸ್, ಫ್ಲೀಟ್ ಗಾರ್ಡ್, ಆರ್‌ಎಸ್‌ಬಿ ಟ್ರಾನ್ಸ್ಮಿಶನ್, ಯುನಿ ಅಬೆಕ್ಸ್, ಶಿಲ್ಪಾ ಮೆಡಿಕಲ್ಸ್ನಂಥ ಬೃಹತ್ ಕೈಗಾರಿಕೆಗಳಿವೆ. ಒಟ್ಟಾರೆ ಸಣ್ಣ ಮತ್ತು ಬೃಹತ್ ಕೈಗಾರಿಕೆ ಸೇರಿ 590 ಇಂಡಸ್ಟಿÃಸ್‌ಗಳಿವೆ. ಆದರೆ, 450 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲ ಕೈಗಾರಿಕೆಗಳು ಸೇರಿ ದಿನನಿತ್ಯ ಸುಮಾರು 20,000 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ.

  • ತ್ಯಾಜ್ಯ ಬೇಕಾಬಿಟ್ಟಿ ವಿಲೇವಾರಿ: ಪುಣೆ- ಬೆಂಗಳೂರು ರಸ್ತೆಗೆ ಹೊಂದಿಕೊ0ಡು ಧಾರವಾಡ ತಾಲೂಕಿನ ಬೇಲೂರು ಬಳಿ ಕೈಗಾರಿಕಾ ಪ್ರದೇಶವಿದೆ. ಇಲ್ಲಿ ತಯಾರಾಗುವ ಉತ್ಪನ್ನಗಳು ದೇಶ- ವಿದೇಶಗಳಿಗೆ ರಫ್ತಾಗುತ್ತವೆ. ಆದರೆ, ಕೈಗಾರಿಕೋದ್ಯಮಿಗಳಿಗೆ ಸಿಗಬೇಕಾದ ಮೂಲ ಸೌಕರ್ಯಗಳಿಲ್ಲ. ಕೈಗಾರಿಕೆಗಳಿಂದ ನಿತ್ಯ ಭಾರಿ ಪ್ರಮಾಣದ ತ್ಯಾಜ್ಯ ಹೊರಹೊಮ್ಮುತ್ತದೆ. ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ವ್ಯವಸ್ಥೆ ಇಲ್ಲ. ತ್ಯಾಜ್ಯ ವಿಲೇವಾರಿಗಾಗಿ ಸುಮಾರು 30 ಎಕರೆ ಪ್ರದೇಶವನ್ನು ಮೀಸಲಿರಿಸಲಾಗಿದೆ. ಆದರೆ, ಕೈಗಾರಿಕೆ ಪ್ರದೇಶ ಆವರಣದ ರಸ್ತೆ ಪಕ್ಕ, ರಾಷ್ಟಿçÃಯ ಹೆದ್ದಾರಿ ಅಕ್ಕಪಕ್ಕ ವಿಲೇವಾರಿ ಮಾಡಲಾಗುತ್ತಿದೆ. ಎಷ್ಟೋ ಬಾರಿ ಕಸಕ್ಕೆ ಬೆಂಕಿ ಹೊತ್ತಿಕೊಂಡ ದಟ್ಟ ಹೊಗೆ ಆವರಿಸಿದ ಉದಾಹರಣೆಗಳಿವೆ.
    ಹಂಚಿಕೆಯಾಗದ ಬಡಾವಣೆ ನಿವೇಶನ: ಇಲ್ಲಿನ ಕೈಗಾರಿಕೋದ್ಯಮಿಗಳು ಹಾಗೂ ಕಾರ್ಮಿಕರಿಗಾಗಿ ಮುಮ್ಮಿಗಟ್ಟಿ- ನರೇಂದ್ರ ವಸತಿ ಬಡಾವಣೆ ಸ್ಥಾಪಿಸಲಾಗಿದೆ. ಮೀಸಲಿರಿಸಿರುವ ಬಡಾವಣೆ ಪ್ರದೇಶದಲ್ಲಿ ವಸತಿ ಸಂಕೀರ್ಣಗಳ ನಿರ್ಮಾಣಕ್ಕೆ ನಿವೇಶನಗಳ ಹಂಚಿಕೆಯಾಗುತ್ತಿಲ್ಲ. ಈ ಕುರಿತು ಕೆಐಎಡಿಬಿ, ಡಿಐಸಿ ಹಾಗೂ ಸಂಘದ ಪದಾಽಕಾರಿಗಳನ್ನು ಒಳಗೊಂಡ ಸಮಿತಿ ರಚಿಸಬೇಕು ಎಂಬುದು ಉದ್ಯಮಿಗಳ ಬೇಡಿಕೆ.

ಉತ್ತರ ಕರ್ನಾಟಕದದಲ್ಲೇ ಬೃಹತ್ತಾದ ಬೇಲೂರು ಕೈಗಾರಿಕಾ ಪ್ರದೇಶ ಈವರೆಗೂ ಕೆಜೆಪಿ ಆಗಿಲ್ಲ. ಕೈಗಾರಿಕಾ ಟೌನ್‌ಶಿಪ್ ಕಾಯ್ದೆಗೆ ಒಳಪಟ್ಟಿಲ್ಲ. ತ್ಯಾಜ್ಯ ವಿಲೇವಾರಿಗೆಂದೇ ಮೀಸಲಿರುವ ಸುಮಾರು 30 ಎಕರೆ ಪ್ರದೇಶ ಬಳಕೆಯಾಗುತ್ತಿಲ್ಲ. ವಸತಿ ಸಂಕೀರ್ಣಗಳ ನಿರ್ಮಾಣಕ್ಕೆ ನಿವೇಶನಗಳ ಹಂಚಿಕೆಯಾಗುತ್ತಿಲ್ಲ. ಹಾಳಾದ ರಸ್ತೆ, ಚರಂಡಿ, ಬೀದಿದೀಪ ವ್ಯವಸ್ಥೆ ಸುಧಾರಣೆ ಆಗಬೇಕು. ಅನಧಿಕೃತ ಕೈಗಾರಿಕೆಗಳ ಮೇಲೆ ಅಧಿಕಾರಿಗಳು ಕಾನೂನು ಕ್ರಮ ಜರುಗಿಸಬೇಕು. ವಿದ್ಯುತ್ ಉಪ ಕೇಂದ್ರಗಳ ಸ್ಥಾಪಿಸಿ ಅಡೆತಡೆ ಇಲ್ಲದೆ ವಿದ್ಯುತ್ ಪೂರೈಸಬೇಕು.

  • ಎಸ್.ಸಿ. ಪಾಟೀಲ (ರಾಜು), ಉಪಾಧ್ಯಕ್ಷ, ಧಾರವಾಡ ಗ್ರೋತ್ ಸೆಂಟರ್ ಇಂಡಸ್ಟಿಸ್ ಅಸೋಸಿಯೇಷನ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net