ತೆಗ್ಗಿ ಗ್ರಾಪಂಗೆ ಅವಿರೋಧ ಆಯ್ಕೆ

An unopposed choice for Tegi Grampa
ಬೀಳಗಿ, ಗ್ರಾಮ ಪಂಚಾಯಿತಿ, ಅಧ್ಯಕ್ಷ, ಉಪಾಧ್ಯಕ್ಷ, ಚುನಾವಣೆ, Baragi, Gram Panchayat, Chairman, Vice-Chairman, Election,
Published on

ಬೀಳಗಿ: ತಾಲೂಕಿನ ತೆಗ್ಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಚಂದ್ರಪ್ಪ ಮಾದರ, ಉಪಾಧ್ಯಕ್ಷರಾಗಿ ಸೋಮಪ್ಪ ಕೂಗಟಿ ಅವಿರೋಧವಾಗಿ ಆಯ್ಕೆಯಾದರು.

ಒಟ್ಟು 24 ಜನ ಸದಸ್ಯ ಬಲದ ಗ್ರಾಪಂ ಚುನಾವಣೆ ಪ್ರಕ್ರಿಯೆಯಲ್ಲಿ 17 ಜನ ಸದಸ್ಯರು ಹಾಜರಿದ್ದು, 7 ಜನ ಸದಸ್ಯರು ಗೈರಾಗಿದ್ದರು.

ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಚಂದ್ರಪ್ಪ ಮಾದರ, ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಸೋಮಪ್ಪ ಕೂಗಟಿ ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದರು. ಅವರನ್ನೇ ಅವಿರೋಧ ಆಯ್ಕೆ ಎಂದು ಘೋಷಿಸಿರುವುದಾಗಿ ಚುನಾವಣಾಧಿಕಾರಿ, ಪಿಡಬ್ಲ್ಯೂಡಿ ಎಇಇ ಐ.ಎಸ್.ಹೊಸೂರ ತಿಳಿಸಿದ್ದಾರೆ.

ತೆಗ್ಗಿ ಗ್ರಾಪಂ ಪಿಡಿಒ ಸದಾಶಿವ ಆರ್. ಕೊಣ್ಣೂರ, ಕಾರ್ಯದರ್ಶಿ ಲಕ್ಷ್ಮಣ ಆರ್. ಅಲಗುಂಡಿ, ರಮೇಶ ಚಿತ್ತರಗಿ, ಶಾಂತೇಶ ಹಿಪ್ಪರಗಿ ಭಾಗವಹಿಸಿದ್ದರು.

ಬೀಳಗಿ ಟಿಎಪಿಸಿಎಂಎಸ್ ಅಧ್ಯಕ್ಷ ಮಲ್ಲಪ್ಪ ಕಾಳಗಿ, ರಮೇಶ ನಾಯಕ, ಸಿದ್ದಣ್ಣ ರಂಗಪ್ಪ ಕೂಗಟಿ, ಗ್ರಾಪಂ ಸದಸ್ಯರಾದ ಅಪ್ಪಾಸಾಬ ಪಾಟೀಲ, ವಿಠ್ಠಲ ಕಳಸನ್ನವರ, ವೆಂಕಣ್ಣ ಮರಡಿ, ಶ್ರೀಶೈಲ ನಾಯಕ, ಶ್ಯಾಮ ಮಾದರ, ವೈ.ಎಸ್. ಸಂಶಿ, ನಿಂಗಪ್ಪ ದಳವಾಯಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net