

ಮಳವಳ್ಳಿ: ತಾಲೂಕಿನ ಬೆಳಕವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ವೆಂಕಟಪ್ಪ, ಉಪಾಧ್ಯಕ್ಷರಾಗಿ ಪಿ.ಅನಿತಾ ಅವಿರೋಧವಾಗಿ ಆಯ್ಕೆಯಾದರು.
ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ವೆಂಕಟಪ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ದೊಡ್ಡಸಿದ್ದಮ್ಮ, ಪಿ.ಅನಿತಾ, ರೂಪಾ ಉಮೇದುವಾರಿಕೆ ಸಲ್ಲಿಸಿದ್ದರು. ಕೊನೇ ಕ್ಷಣದಲ್ಲಿ ಪಿ.ಅನಿತಾ ಹೊರತುಪಡಿಸಿ ಉಳಿದ ಇಬ್ಬರು ತಮ್ಮ ನಾಮಪತ್ರವನ್ನು ಹಿಂಪಡೆದರು. ಹೀಗಾಗಿ ವೆಂಕಟಪ್ಪ ಹಾಗೂ ಪಿ.ಅನಿತಾ ಅಂತಿಮವಾಗಿ ಉಳಿದಿದ್ದರಿಂದ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಭರತೇಶ ಪ್ರಕಟಿಸಿದರು.
18 ಸದಸ್ಯ ಬಲ ಇರುವ ಪಂಚಾಯಿತಿಯಲ್ಲಿ ಒಬ್ಬ ಸದಸ್ಯ ಅಕಾಲಿಕ ಮರಣ ಹೊಂದಿದ ಹಿನ್ನೆಲೆಯಲ್ಲಿ ಉಳಿದ 17 ಸದಸ್ಯರು ಭಾಗಿಯಾಗಿದ್ದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷೆ ಉಮಾ, ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ, ಮುಖಂಡರಾದ ಹುಲ್ಲಂಬಳ್ಳಿ ಚಿಕ್ಕಬಸವರಾಜು, ರಾಮಣ್ಣ, ಶ್ರೀನಿವಾಸ್, ವಿರೂಪಾಕ್ಷ, ಸಿದ್ದಲಿಂಗಯ್ಯ ಇತರರು ಇದ್ದರು.