

ವಿಜಯಪುರ : ಕೆಲಸ ಮುಗಿಸಿಕೊಂಡು ಬೈಕ್ ಮೇಲೆ ಊರಿಗೆ ತೆರಳುತ್ತಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ತಡರಾತ್ರಿ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದ ಬಳಿ ನಡೆದಿದೆ.
ಸಾರವಾಡ ಗ್ರಾಮದ ಬೈಕ್ ಚಾಲಕ ಜಗದೀಶ ಮಾರಪ್ಪ ಲಕಡಿ (೨೭) ಹಾಗೂ ತಿಗಣಿ ಬಿದರಿ ಗ್ರಾಮದ ಸಂತೋಷ ಬಿರಾದಾರ (೨೪), ಭೀಮರಾವ್ ಸಿದ್ದುಬಾ ಶಿಂಧೆ (೨೩) ಮೃತಪಟ್ಟವರು.
ಶನಿವಾರ ರಾತ್ರಿ ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಸಾರವಾಡದಿಂದ ತಿಗಣಿಬಿದರಿಗೆ ಹೊರಟಿದ್ದರು. ಈ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು, ಮೂವರು ಮೃತಪಟ್ಟಿದ್ದಾರೆ. ವಾಹನ ಸವಾರ ವಾಹನ ಸಮೇತ ಪರಾರಿ ಆಗಿದ್ದಾನೆ. ಈ ಬಗ್ಗೆ ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.