ಅರಕಲಗೂಡು : ತಾಲೂಕಿನ ಮೊಕಲಿ ಗ್ರಾಮದ ಕೆರೆಯಲ್ಲಿ ಭಾನುವಾರ ಅಪರಿಚಿತ ಪುರುಷನ ಶವ ಪತ್ತೆಯಾಗಿದೆ. ಯಾರೋ ಕಿಡಿಗೇಡಿಗಳು ಹತ್ಯೆ ಮಾಡಿ, ಕೆರೆಗೆ ತಂದು ಬೀಸಾಡಿದ್ದಾರೆ. ಕುತ್ತಿಗೆ ಹಗ್ಗದಿಂದ ಬಿಗಿದು, ಕೈ, ಕಾಲುಗಳನ್ನು ಕಟ್ಟಿ, ಭಾರವಾದ ಕಲ್ಲನ್ನು ಕಟ್ಟಿ ೀಕರವಾಗಿ ಹತ್ಯೆ ಮಾಡಿ, ಕೆರೆಗೆ ಎಸೆದಿದ್ದಾರೆ. ವಿಷಯ ತಿಳಿದ ಅರಕಲಗೂಡು ಪೊಲೀಸರು ಸ್ಥಳಕ್ಕೆ ತೆರಳಿ, ಕೊಳೆತ ಸ್ಥಿತಿಯಲ್ಲಿದ್ದ ಮೃತ ದೇಹವನ್ನು ನೀರಿನಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆಂದು ಹಾಸನದ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.