ಪಿರಿಯಾಪಟ್ಟಣ ಟಿಎಪಿಸಿಎಂಎಸ್‌ಗೆ ಅವಿರೋಧ ಆಯ್ಕೆ

RemasterDirector_1a5c03258
ಪಿರಿಯಾಪಟ್ಟಣ ಟಿಎಪಿಸಿಎಂಎಸ್ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಎಸ್.ರಾಮು ಹಾಗೂ ತಿಮ್ಮನಾಯಕ ಅವರನ್ನು ಮುಖಂಡರು ಅಭಿನಂದಿಸಿದರು. ಕಾರ್ಯದರ್ಶಿ ಬಿ.ವಿ.ಕಲಾವತಿ ಇತರರು ಇದ್ದರು.
Published on

ಪಿರಿಯಾಪಟ್ಟಣ: ಪಿರಿಯಾಪಟ್ಟಣ ಟಿಎಪಿಸಿಎಂಎಸ್‌ನ ನೂತನ ಅಧ್ಯಕ್ಷರಾಗಿ ಎಸ್.ರಾಮು ಮತ್ತು ಉಪಾಧ್ಯಕ್ಷರಾಗಿ ತಿಮ್ಮನಾಯಕ ಅವಿರೋಧವಾಗಿ ಆಯ್ಕೆಯಾದರು.

ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು.
ಆಂತರಿಕ ಒಪ್ಪಂದದಂತೆ ಈ ಹಿಂದಿನ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ರಾಜೀನಾಮೆ ನೀಡಿದ್ದರಿಂದ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಿಗದಿಪಡಿಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಎಸ್.ರಾಮು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಿಮ್ಮನಾಯಕ ನಾಮಪತ್ರ ಸಲ್ಲಿಸಿದ್ದರು. ಇವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಸಹಕಾರ ಅಭಿವೃದ್ಧಿ ಇಲಾಖಾಧಿಕಾರಿ ಹಿತೇಂದ್ರ ಘೋಷಣೆ ಮಾಡಿದರು.

ನೂತನ ಅಧ್ಯಕ್ಷ ಎಸ್.ರಾಮು ಮಾತನಾಡಿದರು. ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ನೂತನ ಉಪಾಧ್ಯಕ್ಷ ತಿಮ್ಮನಾಯ್ಕ ಮಾತನಾಡಿದರು. ಟಿಎಪಿಸಿಎಂಎಸ್ ನಿರ್ದೇಶಕರಾದ ಜವರಪ್ಪ, ಕುಮಾರ್, ಡಿ.ಎ.ನಾಗೇಂದ್ರ, ಸುನೀತಾ, ಸರ್ವಮಂಗಳಾ, ತಿಮ್ಮೇಗೌಡ, ವಿಜಯ್, ಜಲೇಂದ್ರ, ಕಾರ್ಯದರ್ಶಿ ಬಿ.ವಿ.ಕಲಾವತಿ, ಮುಖಂಡರಾದ ಕಿರಂಗೂರು ಮಹದೇವ್, ಲೋಕೇಶ್ ಐಲಾಪುರ, ಕುಮಾರ್ ಕರಡಿಪುರ, ಶಿವದೇವ್, ಗೋಪಾಲ, ಶಿವಣ್ಣ, ಚಲುವರಾಜ್, ಮಹದೇವ್, ಜಗದೀಶ್, ನಾರಾಯಣ, ಚನ್ನಕಲ್ ಶೇಖರ್, ಸುರೇಶ, ಗಿರೀಶ್ ಕೊಪ್ಪ, ಶಿವಕುಮಾರ್, ರಾಜ್, ರಾಜಣ್ಣ, ನಾಗರಾಜ್, ಸ್ವಾಮಿನಾಯಕ, ಚನ್ನಬಸವ, ಹೊನ್ನೂರಯ್ಯ, ಲಕ್ಷ್ಮಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net