

ಮುಧೋಳ: ನಗರದ ಬಸ್ ನಿಲ್ದಾಣ ಬಳಿ ಶನಿವಾರ ಸಂಜೆ ಕಬ್ಬು ತುಂಬಿದ ಟ್ರಾೃಕ್ಟರ್- ಟ್ರೇಲರ್ ಉರುಳಿ ಬಿದ್ದು, ಸಂಚಾರಕ್ಕೆ ತೀವ್ರ ತೊಂದರೆಯಾಯಿತು.
ಟ್ರಾೃಕ್ಟರ್ ಟ್ರೇಲರ್‌ದಲ್ಲಿನ ಕಬ್ಬುಗಳು ರಸ್ತೆ ತುಂಬ ಬಿದ್ದಿದ್ದವು. ಭಾನುವಾರ ಬೆಳಗಿನವರೆಗೂ ಕಬ್ಬು ತೆರವುಗೊಳಿಸುವ ಕಾರ್ಯಾಚರಣೆ ನಡೆಯಿತು.
ಈ ಹಿಂದೆ ‘ವಿಜಯವಾಣಿ’ಯಲ್ಲಿ ಟ್ರಾೃಕ್ಟರ್‌ದಿಂದಾಗುವ ಪರಿಣಾಮ ಬಗ್ಗೆ ಸುದ್ದಿ ಪ್ರಕಟವಾದ ನಂತರ ರಿಂಗ್ ರಸ್ತೆ ಬೈಪಾಸ್ ಮೂಲಕ ಹೊರಟ್ಟಿದ್ದವು, ಆದರೆ, ಈಗ ಮೊದಲಿನಂತೆ ನಡೆದಿದೆ.
ಹಗಲು ವೇಳೆಯಲ್ಲಿ ಪೊಲೀಸರ ಸರ್ಪಗಾವಲಿನಲ್ಲಿ ಭಾರಿ ಗಾತ್ರದ ವಾಹನಗಳು, ಕಬ್ಬು ಸಾಗಿಸುವ ಟ್ರಾೃಕ್ಟರ್‌ಗಳು ಕಡ್ಡಾಯವಾಗಿ ಬೈಪಾಸ್ ರಸ್ತೆ ಬಳಕೆ ಮಾಡುತ್ತವೆ. ಆದರೆ, ರಾತ್ರಿ ವೇಳೆ ನಗರ ಮಧ್ಯೆ ಸಂಚರಿಸುತ್ತವೆ. ಇದರಿಂದ ಇಂತಹ ಅವಘಡಗಳು ಸಂಭಿಸುತ್ತವೆ. ಚಾಲಕರು ಸ್ವಯಂ ಪ್ರೇರಿತರಾಗಿ ನಿರಂತರ ಬೈಪಾಸ್ ರಸ್ತೆ ಬಳಕೆ ಮಾಡಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ.