

ಕೋಟ: ಸಮಾಜದಲ್ಲಿ ಹಲವು ರೀತಿಯ ಸಮಾಜಸೇವೆಗಳನ್ನು ಕಾಣುತ್ತೇವೆ. ಸಾಮಾಜಿಕ ಕಾರ್ಯಕ್ರಮಗಳಿಂದ ಪಂಚವರ್ಣ ಸಂಘಟನೆ ಜನಮನ್ನಣೆ ಗಳಿಸಿದೆ. ಅಲ್ಲದೆ ಸಂಘಟನೆಯ ಪರಿಸರಸ್ನೇಹಿ ಕಾರ್ಯಕ್ರಮ ಜನರ ಮನಗೆದ್ದಿದೆ ಎಂದು ಸಮಾಜಸೇವಕಿ ಪ್ರೇಮಾ ಆರ್.ಶೆಟ್ಟಿ ಹೇಳಿದರು.
ಕೋಟದ ಪಂಚವರ್ಣ ಯುವಕ ಹಾಗೂ ಯುವತಿ ಮಂಡಲ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ ಕೋಟ, ಜೆಸಿಐ ಕೋಟ ಸಿನಿಯರ್ ಲಿಜನ್ ಸಹಯೋಗದೊಂದಿಗೆ ಕೋಟ ಗ್ರಾಮ ಪಂಚಾಯಿತಿ, ಎಸ್‌ಎಲ್‌ಆರ್‌ಎಂ ಘಟಕ ಸಂಯೋಜನೆಯೊಂದಿಗೆ ಪರಿಸರಸ್ನೇಹಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುವ ತೆಕ್ಕಟ್ಟೆ ಕುವೆಂಪು ಮಾದರಿ ಶಾಲೆಯ ಇಬ್ಬರು ವಿದ್ಯಾರ್ಥಿಗಳಾದ ಸಾನಿಕಾ ಆಚಾರ್ ಹಾಗೂ ನವನೀತ ಜೋಗಿ ಅವರನ್ನು ರೇವತಿ ತೆಕ್ಕಟ್ಟೆ ಹಾಗೂ ಪ್ರೇಮಾ ಆರ್.ಶೆಟ್ಟಿ ಬಹುಮಾನ ನೀಡಿ ಗೌರವಿಸಿದರು. ಜನತಾ ಸಂಸ್ಥೆ ವ್ಯವಸ್ಥಾಪಕ ಶ್ರೀನಿವಾಸ ಕುಂದರ್, ಯುವಕ ಮಂಡಲ ಅಧ್ಯಕ್ಷ ಮನೋಹರ್ ಪೂಜಾರಿ, ಮಹಿಳಾ ಮಂಡಲ ಅಧ್ಯಕ್ಷೆ ಲಲಿತಾ ಪೂಜಾರಿ, ಕಾರ್ಯಾಧ್ಯಕ್ಷೆ ಕಲಾವರಿ ಅಶೋಕ್, ಮಂಡಲ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್, ಕಾರ್ಯಾಧ್ಯಕ್ಷ ಶಶಿಧರ ತಿಂಗಳಾಯ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ನಿರ್ವಹಿಸಿದರು.