ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅವಕಾಶ

HNR-Roatary
Published on

ಹೊನ್ನಾವರ: ವಿಶ್ವ ವೈದ್ಯರ ದಿನಾಚರಣೆ ಅಂಗವಾಗಿ ರೋಟರಿ ಕ್ಲಬ್ ಆಶ್ರಯದಲ್ಲಿ ತಾಲೂಕಿನ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದ ಇವೇಂಟ್ ಚೇರ್ಮನ್ ಡಾ. ಆಶಿಕ್ ಹೆಗಡೆ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ಸೇವೆ ಮಾಡಲು ದೇವರು ಅವಕಾಶ ಕೊಟ್ಟಿದ್ದಾರೆ. ಒಂದು ದಿನವೂ ರಜೆ ಇಲ್ಲದೆ ದಿನದ 24 ಗಂಟೆ ರೋಗಿಗಳ ಸೇವೆಗಾಗಿ ಮೀಸಲಿಡುತ್ತಿದ್ದೇವೆ’ ಎಂದರು.

ರೋಟರಿ ಅಧ್ಯಕ್ಷ ಸೂರ್ಯಕಾಂತ ಸಾರಂಗ ಮಾತನಾಡಿ, ನೂತನವಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ಸಮಯದಲ್ಲಿ ಮೊದಲನೇ ಕಾರ್ಯಕ್ರಮವಾಗಿ ವೈದ್ಯರ ದಿನ ಆಚರಿಸುವ ಅವಕಾಶ ದೊರೆತಿರುವುದು ಸಂತಸ ತಂದಿದೆ ಎಂದರು.

ರೋಟರಿ ಕ್ಲಬ್ ವತಿಯಿಂದ ಪ್ಲಾಸ್ಟಿಕ್ ಬಾಟಲ್ ಸಂಗ್ರಹಣಾ ತೊಟ್ಟಿಯನ್ನು ತಾಲೂಕು ಆಸ್ಪತ್ರೆಗೆ ದೇಣಿಗೆ ನೀಡಲಾಯಿತು.

ರೋಟರಿ ಸದಸ್ಯರಾದ ಸ್ಟೀಫನ್ ರೊಡ್ರಿಗೀಸ್, ದೀಪಕ್ ಲೋಪೀಸ್, ಸತೀಶ ನಾಯ್ಕ, ಡಿ.ಜೆ. ನಾಯ್ಕ, ಜಿ.ಟಿ. ಹೆಬ್ಬಾರ, ಎಸ್.ಎನ್. ಹೆಗಡೆ, ನಾರಾಯಾಣ ಯಾಜಿ, ಸತೀಶ ಭಟ್ ಉಪಸ್ಥಿತರಿದ್ದರು. ಎಂ.ಎಂ. ಹೆಗಡೆ, ದಿನೇಶ ಕಾಮತ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net