ಯುವಕರ ಗಲಾಟೆ ನೋಡುತ್ತಿದ್ದ ವೃದ್ಧನ ತಲೆಗೆ ಏಟು ಬಿದ್ದು ಸಾವು

crime_collage
Published on

ನಗರದ ಸೂಯೇಜ್‌ಫಾರ್ಮ್ ಗೇಟ್ ಬಳಿ ಯುವಕರಿಬ್ಬರ ನಡುವಿನ ಗಲಾಟೆ ಸಂದರ್ಭ ಗಾಯಗೊಂಡಿದ್ದ ವೃದ್ಧರೊಬ್ಬರು ಶನಿವರ ಮೃತಪಟ್ಟಿದ್ದಾರೆ.

ವಿದ್ಯಾರಣ್ಯಪುರಂ ಕನಕಗಿರಿಯ ನಿವಾಸಿ ಲಿಂಗಣ್ಣ(70) ಮೃತರು. ಸೂಯೇಜ್‌ಫಾರ್ಮ್ ಗೇಟ್ ಬಳಿ ಡಿ.28 ರಂದು ಕ್ಷುಲ್ಲಕ ವಿಚಾರಕ್ಕೆ ಸ್ಥಳೀಯ ನಿವಾಸಿಗಳಾದ ವೆಂಕಟೇಶ್ ಹಾಗೂ ಆಕಾಶ್ ನಡುವೆ ಗಲಾಟೆ ನಡೆಯಿತು. ಗಲಾಟೆ ಸಂದರ್ಭ ವೆಂಕಟೇಶ್ ಕ್ರಿಕೆಟ್ ಬ್ಯಾಟ್‌ಅನ್ನು ಆಕಾಶ್ ಮೇಲೆ ಎಸೆದ. ಆದರೆ, ಆ ಬ್ಯಾಟ್ ಗುರಿ ತಪ್ಪಿ ಗಲಾಟೆ ನೋಡುತ್ತಾ ನಿಂತಿದ್ದ ಲಿಂಗಣ್ಣ ತಲೆಗೆ ಬಿತ್ತು.

ಲಿಂಗಣ್ಣ ಅವರನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ದೇಹ ಸ್ಪಂದಿಸದೆ ಮೃತಪಟ್ಟರು. ವಿದ್ಯಾರಣ್ಯಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ವೆಂಕಟೇಶ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net