ಕಾಲ್ನಡಿಗೆಯಲ್ಲೇ ತಿರುಪತಿಗೆ ಹೊರಟ ವೃದ್ಧ

29kmt3_Ganapati Masti Naik
Published on

ಕುಮಟಾ: ತಾಲೂಕಿನ ಮಾಸೂರಿನಿಂದ ಕಾಲ್ನಡಿಗೆಯ ಮೂಲಕ ತಿರುಪತಿಗೆ 76 ವಯಸ್ಸಿನ ವೃದ್ಧರೊಬ್ಬರು ಯಾತ್ರೆ ಹೊರಟಿದ್ದು, ದೈವಭಕ್ತಿಯ ಮುಂದೆ ವಯಸ್ಸು ನಗಣ್ಯವೆಂದು ಸಾರಿದ್ದಾರೆ.

ಕುಮಟಾದಿಂದ ತಿರುಪತಿ ತಿರುಮಲಕ್ಕೆ ಅಂದಾಜು 800 ಕಿಮೀ ಗಳಷ್ಟು ಕಾಲ್ನಡಿಗೆಯ ಯಾತ್ರೆಯ ಸಾಹಸದಲ್ಲಿರುವ ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಗಣಪತಿ ಮಾಸ್ತಿ ನಾಯ್ಕ(ಜಿ.ಎಂ.ನಾಯ್ಕ) ಮೂಲಮನೆ ಮಾಸೂರಿನಲ್ಲಿದೆ. ಪ್ರಸ್ತುತ ರ್ಕಯ ರಾಮೇಶ್ವರ ಸನಿಹದ ಕಂಬಿಯಲ್ಲಿ ವಾಸ್ತವ್ಯ ಹೊಂದಿರುವ ಗಣಪತಿ ನಾಯ್ಕ ಕಾಲ್ನಡಿಗೆ ತಿರುಪತಿ ಯಾತ್ರೆಯನ್ನು ತಮ್ಮ ಮೂಲಮನೆ ಮಾಸೂರಿನಿಂದಲೇ ಜುಲೈ 25 ರಂದು ಆರಂಭಿಸಿದ್ದು, ಈಗಾಗಲೇ ನೂರಾರು ಕಿ.ಮಿ. ಕ್ರಮಿಸಿದ್ದಾರೆ.

ಹಿಂದೊಮ್ಮೆ ಕಾಲ್ನಡಿಗೆ ಮೂಲಕ ತಿರುಪತಿ ದರ್ಶನ ಪಡೆದಿರುವ ಗಣಪತಿ ನಾಯ್ಕ ಅವರು ಧರ್ಮಸ್ಥಳಕ್ಕೆ 4 ಬಾರಿ ಕಾಲ್ನಡಿಗೆಯಲ್ಲಿ ಯಾತ್ರೆ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net