

ರಟ್ಟಿಹಳ್ಳಿ: ತಾಲೂಕಿನ ತೋಟಗಂಟಿ ಗ್ರಾಮದ ನಿವಾಸಿ ಚಂದ್ರಗೌಡ ನಿಂಗನಗೌಡ ದೊಡ್ಡಗೌಡ್ರ (67) ಜು. 22ರಂದು ಕಾಣೆಯಾಗಿದ್ದಾರೆ. ಅಂದು ಬೆಳಗ್ಗೆ 8 ಗಂಟೆಗೆ ಮನೆಯಿಂದ ಹೊರಗೆ ಹೋಗಿ ಬರುತ್ತೇನೆ ಎಂದು ಪತ್ನಿಗೆ ಹೇಳಿದ್ದರು. ಆದರೆ, ಇಲ್ಲಿಯವರೆಗೆ ತಮ್ಮ ಯಾವುದೇ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದಾರೆ ಎಂದು ಪತ್ನಿ ಸುಮತ್ರಾ ದೊಡ್ಡಗೌಡ್ರ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ದೂರು ದಾಖಲಿಸಿದ್ದಾರೆ.