ಅಪಘಾತಕ್ಕೊಳಗಾಗಿದ್ದ ವೃದ್ಧ ಸಾವು

crime
Published on

ಮೈಸೂರು: ಎರಡು ತಿಂಗಳ ಹಿಂದೆ ಅಪಘಾತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ದರೋಬ್ಬರು ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ. ನಗರದ ಬೋಗಾದಿಯ ಟೆಲಿಕಾಂ ಬಡಾವಣೆ ನಿವಾಸಿ ಎಸ್.ರಾಜೇಂದ್ರಪ್ರಸಾದ್(67) ಮೃತರು.

ನ.14 ರಂದು ರಾಜೇಂದ್ರಪ್ರಸಾದ್ ಅವರು ತಮ್ಮ ಬೈಕಿನಲ್ಲಿ ಜೆಸಿ ಕಾಲೇಜು ಕಡೆಯಿಂದ ಹುಣಸೂರು ರಸ್ತೆಯ ಕಡೆಗೆ ತೆರಳುತ್ತಿದ್ದರು. ಈ ವೇಳೆ ಸಿಗ್ನಲ್ ಬಳಿ ವೇಗವಾಗಿ ಬಂದ ಕಾರು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಕೂಡಲೇ ಸಾರ್ವಜನಿಕರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ವಿವಿ ಪುರಂ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net