ಒಂದೇ ಜಿಲ್ಲೆಯಲ್ಲಿ ಆರು ಹುದ್ದೆಗಳನ್ನು ಅಲಂಕರಿಸಿದ ಅಧಿಕಾರಿ

5CBP2NewADC
Published on

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ, ಈ ಭಾಗದಲ್ಲಿ ಸುಧೀರ್ ಕಾಲ ಸೇವೆ ಸಲ್ಲಿಸಿದ ಅಧಿಕಾರಿಗೆ, ಸ್ಥಳಿಯವಾಗಿಯೇ ಮತ್ತೊಂದು ಉನ್ನತ ಜವಾಬ್ದಾರಿ ಸಿಕ್ಕಿದೆ.

ಕಳೆದ ಒಂದೂ ವರೆ ದಶಕದಿಂದಲೂ ತಾಲೂಕು, ಸ್ಥಳಿಯ ಆಡಳಿತ ಸಂಸ್ಥೆಗಳ ಹಂತದಲ್ಲಿ ಉಸ್ತುವಾರಿಯನ್ನು ಹೊಂದಿದ್ದ ಎನ್​.ಭಾಸ್ಕರ್​, ಇದೀಗ ಚಿಕ್ಕಬಳ್ಳಾಪುರ ಅಪರ ಜಿಲ್ಲಾಧಿಕಾರಿಯಾಗಿ ನೇಮಕವಾಗಿದ್ದಾರೆ. ಇದರೊಂದಿಗೆ ಇಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಂಡು ಸೇವೆ ಸಲ್ಲಿಸಿದ ಅಧಿಕಾರಿ ಎಂಬ ಗೌರವಕ್ಕೆ ಪಾತ್ರವಾಗಿದ್ದಾರೆ.

*ವಿವಿಧ ಹುದ್ದೆಗಳು

ಜಿಲ್ಲಾ ವ್ಯಾಪ್ತಿಯ ಚಿಕ್ಕಬಳ್ಳಾಪುರ, ಗೌರಿಬಿದನೂರಿನ ತಹಸೀಲ್ದಾರ್​, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ, ಜಿ.ಪಂ.ಉಪ ಕಾರ್ಯದರ್ಶಿಯಾಗಿ ಎನ್​.ಭಾಸ್ಕರ್​ ಕಾರ್ಯ ನಿರ್ವಹಿಸಿದ್ದಾರೆ. ಇದೀಗ ಇಲ್ಲಿಯೇ ಅಪರ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

*ಎಡಿಸಿ ಅಧಿಕಾರ ಸ್ವೀಕಾರ

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ನೂತನ ಅಪರ ಜಿಲ್ಲಾಧಿಕಾರಿಯಾಗಿ ಎನ್​.ಭಾಸ್ಕರ್​ ಇದೀಗ ಅಧಿಕಾರ ಸ್ವೀಕರಿಸಿದ್ದು ನಿರ್ಗಮಿತ ಅಪರ ಜಿಲ್ಲಾಧಿಕಾರಿ ಎನ್​. ತಿಪ್ಪೇಸ್ವಾಮಿ ನೂತನ ಅಪರ ಜಿಲ್ಲಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ, ಶುಭ ಕೋರಿದರು. ಸ್ಥಳಿಯವಾಗಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಪ್ರತಿಯೊಬ್ಬರು ನೀಡಿದ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ ಎಂದು ಖುಷಿ ವ್ಯಕ್ತಪಡಿಸಿದರು. ಇದೇ ವೇಳೆ ಈ ಭಾಗದಲ್ಲಿ ಜನಪರ ಸಮಸ್ಯೆಗಳ ಪರಿಹಾರಕ್ಕೆ ವಿಶೇಷ ಒತ್ತು ನೀಡುವುದರ ಜತೆಗೆ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ಎನ್​.ಭಾಸ್ಕರ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net