

ರಬಕವಿ-ಬನಹಟ್ಟಿ: ಬನಹಟ್ಟಿ ಸಮೀಪದ ಕೃಷ್ಣಾ ನದಿಗೆ ಬನಹಟ್ಟಿಯ ಶ್ರೀ ಭ್ರಮರಾಂಬಾ ಮತ್ತು ಮಲ್ಲಿಕಾರ್ಜುನ ದಾಸೋಹ ಸೇವಾ ಸಮಿತಿ ಹಾಗೂ ಶ್ರೀ ಕಾಡಸಿದ್ಧೇಶ್ವರ ಅನ್ನ ಪ್ರಸಾದ ಸಮಿತಿಯಿಂದ ಭಾನುವಾರ ಬಾಗಿನ ಅರ್ಪಿಸಲಾಯಿತು.
ತುಂಬಿ ಹರಿಯುತ್ತಿರುವ ಕೃಷ್ಣೆಗೆ ಸಮಿತಿ ಅಧ್ಯಕ್ಷ ಮಹಾರುದ್ರಪ್ಪ ಬರಗಲ್ಲ ಪೂಜೆ ಸಲ್ಲಿಸಿ ಮಾತನಾಡಿದರು.
ನಗರದ ಹಿರಿಯರಾದ ಶ್ರೀಶೈಲ ಧಬಾಡಿ, ಸಿದ್ದನಗೌಡ ಪಾಟೀಲ, ಮಹಾರುದ್ರಪ್ಪ ಬರಗಲ್ಲ, ಸಿದ್ಧರಾಜ ಪೂಜಾರಿ, ಗುರು ಕಾಡದೇವರ, ರವಿ ಪುಂಡೆ, ಗುರು ಗಾಣಿಗೇರ, ಮುತ್ತಪ್ಪ ಗುಂಡಿ, ಭೀಮಸಿ ಮನವಡ್ಡರ, ಬಸಪ್ಪ ಕೊಣ್ಣೂರ, ಶಿವಕುಮಾರ ಜುಂಜಪ್ಪನವರ, ಮಲ್ಲಪ್ಪ ಹನಗಂಡಿ, ಮಹಾನಿಂಗಪ್ಪ ಮಂಡಿ, ಅಶೋಕ ಚಿಂಡಕ, ಈರಪ್ಪ ಬರಗಲ್ಲ, ಈರಯ್ಯ ಕತ್ತಿ, ಲಕ್ಷ್ಮಣ ಬಾಳಿಗಿಡದ, ಗಣಪತಿ ಮಡ್ಡಿಮನಿ, ಮಹಾದೇವ ಬಾಗಲಕೋಟೆ, ಅರುಣ ಕುಲಕರ್ಣಿ ಇತರರಿದ್ದರು.