ಕುಮದ್ವತಿ ನದಿಗೆ ಬಾಗಿನ ಅರ್ಪಣೆ

KUMADHVATI RIVER
Published on

ರಟ್ಟಿಹಳ್ಳಿ: ಕುಮದ್ವತಿ ನದಿಯು ರೈತರ ಜೀವನಾಡಿಯಾಗಿದ್ದು, ಈ ನದಿಯ ಹರಿವಿನಿಂದ ಈ ಭಾಗದ ಅಂತರ್ಜಲಗಳ ವೃದ್ಧಿ, ಕೃಷಿ ಚಟುವಟಿಕೆಗೆ ಸಹಾಯಕವಾಗಿದೆ. ಕೇವಲ ಕೃಷಿ ಚಟುವಟಿಕೆಗೆಗಲ್ಲದೆ, ಜನಜಾನುವಾರುಗಳಿಗೂ ಉಪಯುಕ್ತವಾಗಿದೆ ಎಂದು ಮಠದ ಶ್ರೀ ವಿರೂಪಾಕ್ಷ ಸ್ವಾಮೀಜಿ ಹೇಳಿದರು.

ತಾಲೂಕಿನ ತಿಪ್ಪಾಯಿಕೊಪ್ಪ ಗ್ರಾಮದ ಶ್ರೀ ಮೂಕಪ್ಪ ಶಿವಯೋಗಿ ಮಠದ ಬಳಿ ಹರಿಯುವ ಕುಮದ್ವತಿ ನದಿಗೆ ಮಂಗಳವಾರ ಮಠದ ಭಕ್ತರ ಸಹಯೋಗದೊಂದಿಗೆ ಬಾಗಿನ ಅರ್ಪಸಿ ಅವರು ಮಾತನಾಡಿದರು.

ಮಠದ ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿ, ಮದಗದ ಕೆರೆಯಿಂದ ಕೋಡಿಯ ಮೂಲಕ ಹರಿಯುವ ಕುಮದ್ವತಿ ನದಿಯು ರಟ್ಟಿಹಳ್ಳಿ ತಾಲೂಕಿನ ವಿವಿಧ ಗ್ರಾಮಗಳ ಮೂಲಕ ತುಂಗಭದ್ರಾ ನದಿಗೆ ಸೇರುತ್ತದೆ. ಈ ನದಿಗೆ ಈಗಾಗಲೇ ಸರ್ಕಾರದ ವತಿಯಿಂದ 4 ಕಡೆ ಬಾಂದಾರ ಸಹಿತ ಸೇತುವೆ ನಿರ್ಮಾಣ ಮಾಡಲಾಗಿದೆ. ಸರ್ಕಾರ ಈ ವರ್ಷ ಈ ಬಂದರಗಳಿಗೆ ಗೇಟ್ ಅಳವಡಿಸುವುದರ ಮೂಲಕ ನೀರು ಸಂಗ್ರಹಿಸಿ ರೈತರಿಗೆ ಅನುಕೂಲ ಮಾಡಬೇಕಾಗಿದೆ ಎಂದು ಹೇಳಿದರು.

ಶಾಸಕ ಯು.ಬಿ. ಬಣಕಾರ, ನಾರಾಯಣಪ್ಪ ಗೌರಕ್ಕನವರ, ಸಾಹಿತಿ. ಡಾ.ನಿಂಗಪ್ಪ ಚಳಗೇರಿ, ಷಣ್ಮುಖಪ್ಪ ಚಳಗೇರಿ, ಜಿ.ಪಂ. ಮಾಜಿ ಸದಸ್ಯ ಸುಮಿತ್ರಾ ಪಾಟೀಲ, ಪ್ರಕಾಶ ಜೋಗಿಹಳ್ಳಿ, ಆಶಾ ಕೋರಿ, ರಾಜು ಕೊಟಗಿಮನಿ, ರಾಜು ಚೆನ್ನಗಿರಿ, ಪ್ರಕಾಶ ದೇವಾಂಗದ, ಶಿವಶರಣೆ ಅಕ್ಕಮಹಾದೇವಿ ಮಹಿಳಾ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net