

ಹಾನಗಲ್ಲ: ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಅಳವಡಿಸಿದ್ದ ಎಲ್ಇಡಿ ಜಾಹೀರಾತು ಫಲಕ ಏಕಾಏಕಿ ಕೆಳಗೆ ಬಿದ್ದ ಪರಿಣಾಮ ಪ್ರಯಾಣಿಕರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.
ಜಾಹೀರಾತು ಪ್ರಸಾರಕ್ಕಾಗಿ ಎಲ್ಇಡಿ ಫಲಕವನ್ನು ಬಸ್ ನಿಲ್ದಾಣದ ಮೇಲ್ಛಾವಣಿಗೆ ತೂಗು ಹಾಕಲಾಗಿತ್ತು. ಅದರ ನಟ್ ಬೋಲ್ಟ್ ಕಳಚಿ ಪ್ರಯಾಣಿಕರು ಕುಳಿತುಕೊಳ್ಳುವ ಆಸನದ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಆಗ ಪ್ರಯಾಣಿಕರಾರು ಆ ಆಸನದ ಮೇಲೆ ಕುಳಿತಿರಲಿಲ್ಲ. ಪಕ್ಕದ ಆಸನದಲ್ಲಿ ಕುಳಿತಿದ್ದವರು ಏಕಾಏಕಿ ಜಾಹೀರಾತು ಫಲಕ ಬಿದ್ದಿದ್ದರಿಂದ ಭಯಭೀತರಾಗುವಂತಾಯಿತು.
ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳ ನಿರ್ಲಕ್ಷಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.