ನೆಲಕ್ಕೊರಗಿದ ಕಬ್ಬಿಣದ ಕಂಬ

h27-kamba
Published on

ಹುಬ್ಬಳ್ಳಿ: ನಗರದ ಹುಬ್ಬಳ್ಳಿ-ಗದಗ ಮುಖ್ಯ ರಸ್ತೆಯ ಬಳಿಯಿದ್ದ ಬೃಹದಾಕಾರದ ಕಬ್ಬಿಣದ ಕಂಬ ಮಂಗಳವಾರ ನೆಲಕ್ಕಪ್ಪಳಿಸಿದ್ದು, ದೊಡ್ಡ ದುರಂತ ತಪ್ಪಿದೆ.

ರೈಲ್ವೆ ಬ್ರಿಡ್ಜ್ ಕೆಳಗೆ ರಸ್ತೆ ಇದೆ. ದೊಡ್ಡ ವಾಹನಗಳನ್ನು ನಿರ್ಬಂಧಿಸುವ ದೃಷ್ಟಿಯಿಂದ ಇದರ ಮುಂದೆ ಕಬ್ಬಿಣದ ಕಂಬ ಹಾಕಲಾಗಿತ್ತು. ತುಕ್ಕು ಹಿಡಿದು ತನ್ನಿಂದತಾನೇ ನೆಲಕ್ಕೊರಗಿದೆ. ಆದರೆ, ಲಾರಿ ಪಾಸಾದ ತಕ್ಷಣ ಈ ಕಂಬ ಬಿದ್ದಿದೆ. ಹಿಂದೆ ಬಸ್ ಸಹ ಇತ್ತು. ಆದರೆ, ಯಾವುದೇ ಅಪಾಯ ಸಂಭವಿಸಿಲ್ಲ. ದ್ವಿಚಕ್ರ ವಾಹನ ಸವಾರ ಹೋಗಬೇಕೆನ್ನುವಷ್ಟರಲ್ಲಿ ಸ್ವಯಂ ನಿಯಂತ್ರಿಸಿಕೊಂಡಿದ್ದಾನೆ. ಜನದಟ್ಟಣೆ ಪ್ರದೇಶವಿದ್ದರೂ ಯಾವುದೇ ದುರಂತ ಸಂಭವಿಸಿಲ್ಲ. ಈ ಕುರಿತು ಸಿಸಿ ಕ್ಯಾಮರಾದಲ್ಲಿ ಎಲ್ಲವೂ ಸೆರೆಯಾಗಿದೆ.

ಕಳೆದ ಮೂರು ತಿಂಗಳ ಹಿಂದೆ ಈ ರೀತಿಯ ದುರ್ಘಟನೆ ಸಂಭವಿಸಿತ್ತು. ಕಬ್ಬಿಣದ ಕಂಬ ತೆಗೆಸುವಂತೆ ಒತ್ತಾಯಗಳೂ ಕೇಳಿಬಂದಿದ್ದವು. ಆದರೂ ಸಂಬಂಧಿಸಿದವರು ಎಚ್ಚರವಹಿಸಿಲ್ಲ. ದುರ್ಘಟನೆ ಸಂಭವಿಸುವ ಮುನ್ನವೇ ಕಬ್ಬಿಣದ ಕಂಬಗಳನ್ನು ವಿಲೇವಾರಿ ಮಾಡಿ ಜನರ ಜೀವ ಉಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net