ಬೀಚಿ ಬಳಗದ ದಶಮಾನೋತ್ಸವಕ್ಕೆ ಶ್ರೀಗಳಿಗೆ ಆಮಂತ್ರಣ

BEECHI
Published on

ನರೇಗಲ್ಲ: ಗ್ರಾಮ, ಪಟ್ಟಣ ಮತ್ತು ನಗರಗಳಲ್ಲಿ ಮೇಲಿಂದ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವುದರಿಂದ ಗ್ರಾಮಗಳು ಸಂಸ್ಕೃತಿಯ ಕೇಂದ್ರಗಳಾಗುತ್ತವೆ ಎಂದು ಹಾಲಕೆರೆ ಸಂಸ್ಥಾನ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.

ನರೇಗಲ್ಲ ಬೀಚಿ ಬಳಗದ ದಶಮಾನ ಸಂಭ್ರಮಕ್ಕೆ ಆಗಮಿಸಲು ಬೀಚಿ ಬಳಗದ ಸದಸ್ಯರು ಶುಕ್ರವಾರ ನೀಡಿದ ಆಮಂತ್ರಣವನ್ನು ಸ್ವೀಕರಿಸಿ, ಬಳಗದ ಸದಸ್ಯರನ್ನು ಆಶೀರ್ವದಿಸಿ ಅವರು ಮಾತನಾಡಿದರು.

ಸಾಂಸ್ಕೃತಿಕ ಕಾರ್ಯಗಳು ಸಂಸ್ಕೃತಿಯನ್ನು ಬಿತ್ತುವ ಮೂಲ ಆಧಾರಗಳಾಗಿವೆ. ಇಂಥ ಕಾರ್ಯಗಳ ಮೂಲಕ ಗ್ರಾಮದ ಜನರ ಮನೋಭಾವನೆ ಬದಲಾಯಿಸಲು ಸಾಧ್ಯವಾಗುತ್ತದೆ’ ಎಂದರು.

ಡಿಸೆಂಬರ್ 10ರಂದು ಜರುಗಲಿರುವ ಬೀಚಿ ಬಳಗದ ದಶಮಾನೋತ್ಸವಕ್ಕೆ ಬೀಚಿಯವರ ಮೊಮ್ಮಗ, ಹರಟೆಯ ಮಲ್ಲರಾದ ಕನ್ನಡದ ಪೂಜಾರಿ ಕಣ್ಣನ್ ಮಾಮಾ, ಹಾಸ್ಯ ದಿಗ್ಗಜರಾದ ಬಿ. ಪ್ರಾಣೇಶ, ಬಸವರಾಜ ಮಹಾಮನಿ, ಅನಿಲ ವೈದ್ಯ, ನರಸಿಂಹ ಜೋಶಿ, ನಾಗಶ್ರೀ ತ್ಯಾಗರಾಜನ್ ಆಗಮಿಸುತ್ತಿರುವುದು ಸಂತಸದ ಸಂಗತಿ. ಇಂತಹ ಮಹತ್ತರವಾದ ಅವಕಾಶವನ್ನು ಯಾರೂ ಕಳೆದುಕೊಳ್ಳಬಾರದು ಎಂದು ಶ್ರೀಗಳು ಹೇಳಿದರು.

ಬೀಚಿ ಬಳಗದ ಸಂಚಾಲಕ ಈಶ್ವರ ಬೆಟಗೇರಿ, ಕೋಶಾಧ್ಯಕ್ಷ ಶಿವಯೋಗಿ ಜಕ್ಕಲಿ, ಡಾ. ಆರ್.ಕೆ. ಗಚ್ಚಿನಮಠ, ವಕೀಲ ರಾಜಶೇಖರಗೌಡ ಪಾಟೀಲ, ನಿವೃತ್ತ ಶಿಕ್ಷಕ ಎಂ.ಎಸ್. ದಢೇಸೂರಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net