ಮೌಲ್ಯಯುತ ಸಂಬಂಧ ಅರಿಯಲು ಪರಿಚಯ ಸಮ್ಮೇಳನ ಪೂರಕ

22KDR2 (1)
ಕಡೂರಲ್ಲಿ ಆಯೋಜಿಸಿದ್ದ ವಧು ವರರ ಪರಿಚಯ ಸಮ್ಮೇಳನವನ್ನು ಶಶಿ ಸುರೇಶ್ ನವಲೆ ಉದ್ಘಾಟಿಸಿದರು.
Published on

ಕಡೂರು: ಜಗತ್ತು ಆಧುನಿಕವಾಗಿ ಬೆಳೆದರೂ ಭಾರತದಲ್ಲಿ ಸಂಪ್ರದಾಯ ಮತ್ತು ಸಂಸ್ಕಾರಗಳು ಉತ್ತುಂಗ ಶಿಖರದಲ್ಲಿರಲು ನಮ್ಮ ಪೂರ್ವಜರು ಕಾರಣ ಎಂದು ಭಾವಸಾರ ವಿಜನ್ ರಾಷ್ಟ್ರೀಯ ಅಧ್ಯಕ್ಷೆ ಶಶಿ ಸುರೇಶ್ ನವಲೆ ಹೇಳಿದರು.
ಪಟ್ಟಣದ ಶ್ರೀಪಾಂಡುರಂಗ ರುಕ್ಮಿಣಿ ಕಲ್ಯಾಣ ಮಂಟಪದಲ್ಲಿ ಭಾವಸಾರ ವಿಜನ್ ಇಂಡಿಯಾ ಏರಿಯಾ 103 ಮತ್ತು ಭಾವಸಾರ ಕ್ಷತ್ರಿಯ ಸಮಾಜದ ಸಹಯೋಗದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ವಧು-ವರರ ಪರಿಚಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಇಂದು ಸತಿ ಪತಿಯರು ಸಾಮಾರಸ್ಯರದ ಜೀವನ ನಡೆಸಲು ನಮ್ಮ ಪೂರ್ವಜರು ಅಂದಿನ ಕಾಲದಿಂದಲೂ ಮುಂದುವರಿಸಿಕೊಂಡು ಬಂದಿರುವ ಶಾಸ್ತ್ರ, ಸಂಪ್ರದಾಯಗಳೇ ಕಾರಣ. ಕೌಟುಂಬಿಕ ಸಂಬಂಧಗಳು ಗಾಢವಾಗಿ ಬೆಸೆದುಕೊಂಡು ಮುಂದುವರಿಯಲು ಮತ್ತು ಮುಂದಿನ ಪೀಳಿಗೆಗೆ ಈ ಸಂಬಂಧಗಳನ್ನು ತಲುಪಿಸುವಲ್ಲಿ ನಮ್ಮ ಜವಾಬ್ದಾರಿ ಹೆಚ್ಚಾಗಿದೆ. ಮೌಲ್ಯಯುತ ಸಂಬಂಧಗಳನ್ನು ಪರಸ್ಪರ ಅರಿಯಲು ಪರಿಚಯ ಸಮ್ಮೇಳನಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು ಎಂದರು.
ಭಾವಸಾರ ಕ್ಷತ್ರಿಯ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಎನ್.ಮಂಜುನಾಥ್ ಮಾತನಾಡಿ, ಭಾವಸಾರ ಸಮಾಜದ ವಧು ವರರು ಪರಸ್ಪರ ಬೆರೆತು ವೈವಾಹಿಕ ಜೀವನಕ್ಕೆ ಕಾಲಿಡಲು ಅನುಕೂಲವಾಗುವಂತೆ ನಾಲ್ಕನೇ ಬಾರಿ ರಾಜ್ಯಮಟ್ಟದ ವಧು ವರರ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net