ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ

01Hnp2
ಹೊಳೆನರಸೀಪುರದಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗ್ರೀನ್‌ವುಡ್ ಹಾಗೂ ಸ್ವರ್ಣ ವಿದ್ಯಾ ಸಂಸ್ಥೆ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ದಸರಾ ಉತ್ಸವ ಗಮನ ಸೆಳೆಯಿತು.
Published on

ಹೊಳೆನರಸೀಪುರ: ತಾಲೂಕು ಆಡಳಿತದಿಂದ ಶುಕ್ರವಾರ ಬಯಲು ರಂಗಮಂದಿರದ ಆವರಣದಲ್ಲಿ ಆಯೋಜಿಸಿದ್ದ 69 ನೇ ಕನ್ನಡ ರಾಜ್ಯೋತ್ಸವದಲ್ಲಿ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.

ಪಟ್ಟಣದ ಗ್ರೀನ್‌ವುಡ್ ಆಂಗ್ಲಮಾಧ್ಯಮ ಶಾಲೆ, ಸ್ವರ್ಣ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನಡೆಸಿಕೊಟ್ಟ ವಿವಿಧ ಕನ್ನಡ ಗೀತೆಗಳ ಸಾಮೂಹಿಕ ನೃತ್ಯ, ಕೊಡವರ ನೃತ್ಯ, ಕೋಲಾಟ, ಹುಲಿವೇಷ, ಶಿಲಾ ಬಾಲಕಿಯರ ನೃತ್ಯ, ಯಕ್ಷಗಾನ, ದಸರಾ ಅಂಬಾರಿ ಉತ್ಸವ ಸುಂದರವಾಗಿ ಮೂಡಿ ಬಂದು ಗಣ್ಯರ ಪ್ರಶಂಸೆಗೆ ಪಾತ್ರವಾಯಿತು.

ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಅವರು ರಾಷ್ಟ್ರ ಹಾಗೂ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಪಥಸಂಚಲದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು. ಬಾಲಕಿಯರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಆರ್.ಎನ್.ರವಿ ಪ್ರಧಾನ ಭಾಷಣ ಮಾಡಿದರು.

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸುರೇಶ್ ಕುಮಾರ್, ಚಂದ್ರು, ಚಂದ್ರಶೇಖರ್, ಹಸೀಂ ಸಾಬ್, ಬಸವರಾಜು, ತ್ರಿವೇಣಿ, ಚಲನಚಿತ್ರ ನಿರ್ದೇಶಕ ಸಿದ್ದು ಪೂರ್ಣಚಂದ್ರ, ಓಹಿಲೇಶ್, ಧರಣೇಶ್, ಬಿ.ಆರ್. ರೇವಣ್ಣ, ಪಟ್ಟಾಭಿಗೌಡ, ಪ್ರಗತಿಪರ ರೈತರಾದ ಡಿ.ಕೆ. ಯೋಗೇಶ್, ನಾಗವರ್ಮ ಹಾಗೂ ಕುಮಾರ್, ಸುರೇಶ್, ಪ್ರಕಾಶ್, ಕವನಾ, ಜನರಿಗೆ ತ್ವರಿತ ಸೇವೆ ನೀಡುತ್ತ ಜಿಲ್ಲೆಯಲ್ಲಿ ಪ್ರಥಮ ಸ್ಥಾನಗಳಿಸಲು ಕಾರಣರಾದ ತಾಲೂಕು ಕಚೇರಿ ಸಿಬ್ಬಂದಿ ಜೀವಿತಾ, ಶಿಲ್ಪಾ, ಮೋನಿಕಾ ಅವರನ್ನು ಸನ್ಮಾನಿಸಲಾಯಿತು.

ಪುರಸಭಾಧ್ಯಕ್ಷ ಕೆ.ಶ್ರೀಧರ್, ಉಪಾಧ್ಯಕ್ಷೆ ಸಾವಿತ್ರಮ್ಮ, ಮಾಜಿ ಅಧ್ಯಕ್ಷೆ ಸುಧಾ ನಳಿನಿ, ಬಿಇಒ ಸೋಮಲಿಂಗೇಗೌಡ, ಇಒ ಗೋಪಾಲ್, ಸಪ್ನಾ, ಡಾ.ತಿಪ್ಪೇಸ್ವಾಮಿ, ಓಹಿಲೇಶ್, ಪ್ರಾಂಶುಪಾಲ ದೇವರಾಜೇಗೌಡ, ಎಸ್‌ಐ ರಂಗಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ, ಬಿಜೆಪಿ ಮುಖಂಡ ನಾರಾಯಣ, ಪುಣ್ಯವತಿ, ಸುಜತ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net